28.2 C
Udupi
Thursday, April 30, 2026
spot_img
spot_img
HomeBlogಕಾರ್ಕಳ ತಾಲೂಕಿನ 6 ಗ್ರಾ.ಪಂ ಗಳಲ್ಲಿ ಉಪಚುನಾವಣೆ:ಫಲಿತಾಂಶ

ಕಾರ್ಕಳ ತಾಲೂಕಿನ 6 ಗ್ರಾ.ಪಂ ಗಳಲ್ಲಿ ಉಪಚುನಾವಣೆ:ಫಲಿತಾಂಶ

ಕಾರ್ಕಳ ತಾಲೂಕಿನ 6 ಗ್ರಾ.ಪಂ ಗಳಲ್ಲಿ ಉಪಚುನಾವಣೆಯು ನ.23 ರಂದು ನಡೆದಿದ್ದು,ನ.26 ಇಂದು ಮತ ಎಣಿಕೆ ನಡೆದಿದೆ.

ಈದು ಗ್ರಾ. ಪಂ.ನಲ್ಲಿ ಬಿಜೆಪಿಯ ಜಯಂತಿ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿಯಾಗಿ ವಾರಿಜಾ ಸ್ಪರ್ಧಿಸಿದ್ದರು, 524 ಪುರುಷರು, 506 ಮಹಿಳೆಯರು ಸೇರಿದಂತೆ ಒಟ್ಟು 1030 ಮತದಾರರಿದ್ದು, ಇದರಲ್ಲಿ ಜಯಂತಿ 296 ಹಾಗೂ ವಾರಿಜಾ 204 ಮತ ಪಡೆದಿದ್ದು 92 ಮತಗಳ ಅಂತರದಲ್ಲಿ ಜಯಂತಿ ಗೆಲುವು ಸಾಧಿಸಿದ್ದಾರೆ

ಕೆರ್ವಾಶೆ ಗ್ರಾ. ಪಂ.ನಲ್ಲಿ ಬಿಜೆಪಿಯ ಧರ್ಮರಾಜ ಹೆಗ್ಡೆ ಗೆಲುವು ಸಾಧಿಸಿದ್ದಾರೆ.ಬಿಜೆಪಿಯಿಂದ ಧರ್ಮರಾಜ ಹೆಗ್ಡೆ ಹಾಗೂ ಕಾಂಗ್ರೆಸ್‌ನಿಂದ ನಾರಾಯಣ ನಾಯಕ್ ಸ್ಪರ್ಧಿಸಿದ್ದು. 377 ಪುರುಷರು, 383 ಮಹಿಳೆಯರು ಸೇರಿದಂತೆ ಒಟ್ಟು 760 ಮತದಾರರಿದ್ದು, ಧರ್ಮರಾಜ ಹೆಗ್ಡೆ 367 ಮತ ಹಾಗೂ ನಾರಾಯಣ ನಾಯಕ್ 213 ಮತ ಪಡೆದಿದ್ದಾರೆ.

ನಲ್ಲೂರು ಗ್ರಾ. ಪಂ.ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸವಿತಾ ಶ್ರೀಧರ್ ಗೆ ಜಯ,ಕಾಂಗ್ರೆಸ್‌ನಿಂದ ಸವಿತಾ ಶ್ರೀಧರ್ ಹಾಗೂ ಬಿಜೆಪಿ ಸುಮತಿ ಸ್ಪರ್ಧಿಸಿದ್ದರು. ಇಲ್ಲಿ 440 ಪುರುಷರು, 454 ಮಹಿಳೆಯರು ಸೇರಿದಂತೆ ಒಟ್ಟು 894 ಮತದಾರರಿದ್ದು. ಸವಿತಾ 321 ಮತ ಹಾಗೂ ಸುಮತಿ 256 ಮತ ಪಡೆದಿದ್ದು, 65 ಮತಗಳ ಅಂತರದಲ್ಲಿ ಸವಿತಾ ಶ್ರೀಧರ್ ಗೆಲುವು ಸಾಧಿಸಿದ್ದಾರೆ.

ನಿಟ್ಟೆ ಗ್ರಾ. ಪಂ.ನಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ರೀನಾ ಡಿ’ಸೋಜಾ ಗೆಲುವು,ನಿಟ್ಟೆ ಪಂಚಾಯತ್‌ನಲ್ಲಿ ಬಿಜೆಪಿಯಿಂದ ಜ್ಯೋತಿ ರೀನಾ ಡಿ’ಸೋಜಾ ಹಾಗೂ ಕಾಂಗ್ರೆಸ್‌ನಿಂದ ಲಿನೆಟ್ ಮರೀನಾ ಡಿ’ಸೋಜಾ ಸ್ಪರ್ಧಿಸಿದ್ದರು,ಜ್ಯೋತಿ ರೀನಾ ಡಿ’ಸೋಜಾ 124 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕಡ್ತಲ ಗ್ರಾ. ಪಂ.ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಕ್ಷಿತ್ ಶೆಟ್ಟಿ ಗೆಲುವು,ಕಾಂಗ್ರೆಸ್‌ನಿಂದ ದೀಕ್ಷಿತ್ ಶೆಟ್ಟಿ ಹಾಗೂ ಬಿಜೆಪಿಯಿಂದ ಗುಣವತಿ ಅರವಿಂದ ಹೆಗ್ಡೆ ಸ್ಪರ್ಧೆಸಿದ್ದು, 392 ಪುರುಷರು, 422 ಮಹಿಳೆಯರು ಸೇರಿದಂತೆ ಒಟ್ಟು 814 ಮತದಾರರಿದ್ದು , ದೀಕ್ಷಿತ್ ಶೆಟ್ಟಿ 371 ಮತ ಹಾಗೂ ಗುಣವತಿ ಹೆಗ್ಡೆ 283 ಮತ ಪಡೆದಿದ್ದು 87 ಮತಗಳ ಅಂತರದಲ್ಲಿ ದೀಕ್ಷಿತ್ ಗೆಲುವು ಸಾಧಿಸಿದ್ದಾರೆ.

ನೀರೆ ಗ್ರಾಮ ಪಂಚಾಯತ್ ಗೆ ನಡೆದ ಉಪಚುನಾವಣೆಯಲ್ಲಿ ನೀರೆ ಗ್ರಾ.ಪಂ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ಅವಿರೋಧ ಆಯ್ಕೆಯಾಗಿದ್ದು,ಪಕ್ಷೇತರ ಅಭ್ಯರ್ಥಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ಮಹೇಶ್ ವಿಜೇತರಾಗಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page