
ಕಾರ್ಕಳ:ಡಿ 03 ಮಂಗಳವಾರ ರಾತ್ರಿ 9.30 ದ ವೇಳೆಗೆ ಮರಳು ಸಾಗಾಟ ದ ಟಿಪ್ಪರ್ ರೆಂಜಾಳ ಪೆರಾಲ್ದಬೆಟ್ಟು ಕ್ರಾಸ್ ಬಸ್ಸು ನಿಲ್ದಾಣ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ.
ಚಾಲಕ, ಅದರ ಮಾಲಕ ಮತ್ತು ಕ್ಲೀನರ್ ಇವರುಗಳು ಸಂಘಟಿತರಾಗಿ ಮರಳನ್ನು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಟಿಪ್ಪರಿನಲ್ಲಿ 2 ಯುನಿಟ್ ಮರಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬೆಳುವಾಯಿ ಕಡೆಯಿಂದ ರೆಂಜಾಳ ಮಾರ್ಗವಾಗಿ ಕಾರ್ಕಳ ಕಡೆಗೆ ಅತಿವೇಗವಾಗಿ ಚಲಾಯಿಸಿಕೊಂಡು ಬರುವಾಗ ಈ ಘಟನೆ ನಡೆದಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















