
ಉಡುಪಿ ತಾಲೂಕಿನ ಕೊಡಿಬೆಟ್ಟು – ಪಟ್ಲ ಕ್ರಾಸ್ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡಗಳು ಬಿದ್ದಿವೆ.
“ಮುಖ್ಯ ರಸ್ತೆಯ ವಾಹನದಟ್ಟಣೆಯನ್ನು ತಪ್ಪಿಸಲು ಸಾಕಷ್ಟು ಜನರು ಪಟ್ಲ ಕ್ರಾಸ್ ರಸ್ತೆಯ ಮೂಲಕ ಪ್ರಯಾಣಿಸುತ್ತಾರೆ. ಮಣಿಪಾಲ, ಉಡುಪಿಗೆ ಇದು ಸಮೀಪದ ದಾರಿಯಾಗಿರುವುದರಿಂದ ಕೊಡಿಬೆಟ್ಟು ಪೆರ್ಣಂಕಿಲ ಭಾಗದ ಅನೇಕ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತವೆ. ಮುಂದಿನ ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಹದಗೆಡಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು, ಅಧಿಕಾರಿಯವರು ಈ ಬಗ್ಗೆ ಗಮನ ಹರಿಸಿ, ರಸ್ತೆಯನ್ನು ಅಗಲೀಕರಿಸಿ, ಸಂಪೂರ್ಣವಾಗಿ ದುರಸ್ತಿಕರಿಸಬೇಕಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ.





























