
ಕಾರ್ಕಳ, ಜುಲೈ 12: ಸ್ಥಳೀಯ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ನೆಲ್ಲಿಗುಡ್ಡೆ ಆಶ್ರಯದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜ್ವಾಲ್ಲಿ ಬಾಯ್ಸ್ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಗಳನ್ನು ವಿತರಿಸಲಾಯಿತು. ಜೊತೆಗೆ ಮಂಡಳಿಯ ವತಿಯಿಂದ ಆಯೋಜಿಸಿರುವ ಭಜನಾ ತರಬೇತಿ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಇದೇ ವೇಳೆ, 2025-26ನೇ ಸಾಲಿನ SSLC ಹಾಗೂ ದ್ವಿತೀಯ PUC ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಮಂಡಳಿಯ ವಿದ್ಯಾರ್ಥಿ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ನೆಲ್ಲಿಗುಡ್ಡೆ ಗೆಳೆಯರ ಬಳಗದ ಅಧ್ಯಕ್ಷರಾದ ಸುರೇಶ್ ಸಾಲಿಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಡಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಜತ್ ರಾಮ್ ಮೋಹನ್, ಕಾರ್ಕಳ ತಾಲ್ಲೂಕು ಭಜನಾ ಒಕ್ಕೂಟಗಳ ಅಧ್ಯಕ್ಷ ಶ್ರೀಕಾಂತ್ ಪ್ರಭು, ಯುವಕ ಮಂಡಲ, ಕಡರಿ ಅಧ್ಯಕ್ಷ ಗುರುಪ್ರಸಾದ್ ಪೇರಡ್ಕ, ಮಂಜು ಶ್ರೀ ಭಜನಾ ಮಂಡಳಿಯ ಕಾರ್ಯದರ್ಶಿ ಅವಿನಾಶ್ ಕುಲಾಲ್, ಜ್ವಾಲಿ ಬಾಯ್ಸ್ ತಂಡದ ಪ್ರಶಾಂತ್ ಶೆಟ್ಟಿ, ಸುದರ್ಶನ್ ರಾವ್ ಹಾಗೂ ಮಂಡಳಿಯ ಅಧ್ಯಕ್ಷೆ ಸುಚಿತ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೇಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅದ್ಯಾ ಶೆಟ್ಟಿ ಹಾಗೂ ಶ್ರುತಿ ಶೆಟ್ಟಿ ಪ್ರಾರ್ಥನೆಗೈದರು. ಸೌಮ್ಯ ಶ್ರೀ ಪ್ರಸ್ತಾವನೆಗೈದರು. ಸುಕನ್ಯಾ ಸ್ವಾಗತಿಸಿದರೆ, ಚಂದನ ಆಚಾರ್ಯ ವಂದನಾರ್ಪಣೆಗೈದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮಂಡಳಿಯ ಕಾರ್ಯವನ್ನು ನೆರೆದ ಗಣ್ಯರು ಶ್ಲಾಘಿಸಿದರು.













































