
2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಕಟಿಸಿದೆ. ಈ ಬಾರಿ ಶೇ 94.10 ಉತ್ತೀರ್ಣ ಪ್ರಮಾಣ ದಾಖಲಾಗಿದ್ದು, ಹಿಂದಿನ ವರ್ಷಗಳಿಗಿಂತ ಉತ್ತಮ ಸಾಧನೆ ಕಂಡುಬಂದಿದೆ.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಅವಕಾಶ ನೀಡಲಾಗಿದ್ದು ಪರೀಕ್ಷೆ-2 ಮೇ 18ರಿಂದ ಮೇ 25ರವರೆಗೆ ನಡೆಯಲಿದೆ. ಈ ಬಾರಿ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಮೂರನೇ ಪರೀಕ್ಷೆ ಇರೋದಿಲ್ಲ ಎಂದು ಮಂಡಳಿ ತಿಳಿಸಿದೆ.
ಅಂಕಗಳ ಬಗ್ಗೆ ಅಸಮಾಧಾನವಿರುವವರು ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಬಹುದು. ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ kseab.karnataka.gov.in ಮೂಲಕ ಅರ್ಜಿ ಹಾಕಬೇಕು.
ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಮುಂದಿದ್ದಾರೆ. ದಕ್ಷಿಣ ಕನ್ನಡ ಶೇ 98.40ರೊಂದಿಗೆ ಮೊದಲ ಸ್ಥಾನ ಪಡೆದಿದ್ದು, ಉಡುಪಿ ದ್ವಿತೀಯ (98.18) ಮತ್ತು ಉತ್ತರ ಕನ್ನಡ (98.09) ತೃತೀಯ ಸ್ಥಾನ ಪಡೆದಿದೆ. ಕಲಬುರಗಿ ಶೇ 85.06ರೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಒಟ್ಟಾರೆ ಫಲಿತಾಂಶವು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ವಿದ್ಯಾರ್ಥಿಗಳ ಉತ್ತಮ ಸಾಧನೆ ಮತ್ತು ನೀಡಿರುವ ಅವಕಾಶಗಳು ಅವರ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಿವೆ.













