ಬೆಳ್ಳಿಪ್ಪಾಡಿ ನೇಮಿರಾಜ್ ರೈ, ಸಾಮಾಜಿಕ ಚಿಂತಕ

ಒಂದೆಡೆ ರಾಜ್ಯದಲ್ಲಿ ಬರಗಾಲ. ಮತ್ತೊಂದೆಡೆ ರಾಜ್ಯದ ಬೊಕ್ಕಸಕ್ಕೆ ತೀವ್ರ ಹಣ ಕಾಸಿನ ಒತ್ತಡ.ಕೇಂದ್ರದಿಂದ ಬರಬೇಕಾದ ಹಣವೂ ಬರುತ್ತಾ ಇಲ್ಲ. ಇಂತಹ ಸಂದರ್ಭ
ದಲ್ಲಿ ಜನರ ತೆರಿಗೆ ಹಣವನ್ನು ಎಲ್ಲೆಲ್ಲಿ ಉಳಿಸಬಹುದು ಎಂಬುದನ್ನು ಸರಕಾರ ಯೋಚಿಸಬೇಕಲ್ಲವೇ? ಶ್ರೀ ಲಂಕಾ ಇದಕ್ಕೆ ಒಂದು ಮಹತ್ವರ ಉದಾಹರಣೆನೀಡಿದೆ.2026 ಫೆಬ್ರವರಿಯಲ್ಲಿ ಅಲ್ಲಿನ ಸಂಸತ್ತು ಸಂಸದೀಯ ಪಿಂಚಣಿ ವ್ಯವಸ್ಥೆ
ಯನ್ನೇ ಕೊನೆಗೊಳಿಸಿತು .
ಹಾಗಾದರೆ ನಮ್ಮ ದೇಶದಲ್ಲಿ
ಏಕೆ ಸಾಧ್ಯವಿಲ್ಲ?
ಜನರು ತೆರಿಗೆ ಕಟ್ಟಬೇಕು, ರೈತರು ಬರ ಎದುರಿಸ ಬೇಕು, ಯುವಕರು ಉದ್ಯೋಗಕ್ಕಾಗಿ ಅಲೆದಾಡಬೇಕು. ಆದರೆ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ನಿವೃತ್ತಿ ನಂತರವೂ ಪಿಂಚಣಿ, ಸವಲತ್ತು ಸೌಲಭ್ಯಗಳ ಸರಮಾಲೆ ಮುಂದರಿಯ ಬೇಕೇ? ರಾಜಕೀಯ ಪಕ್ಷಗಳು ಜನರ ಕಷ್ಟದ ಬಗ್ಹೆ ಮಾತನಾಡುವುದಕ್ಕಿಂತ ಮೊದಲು ಜನರ ಹಣದ ಮೇಲಿನ ತಮ್ಮದೇ ಸವಲತ್ತು
ಗಳನ್ನು ಮರಪರಿಶೀಲಿಸಲಿ ಶಾಸಕರು, ಸಂಸದರು,ಹಾಗೂ ಇತರ ಜನಪ್ರತಿನಿಧಿಗಳ ಪಿಂಚಣಿ ಮತ್ತು ಅನಗತ್ಯ ಸವಲತ್ತುಗಳನ್ನು ಕಡಿತಗೊಳಿ
ಸಲು ಅಥವಾ ರದ್ದು
ಪಡಿಸಲು ಎಲ್ಲಾ ರಾಜಕೀಯ ಪಕ್ಷಗಳೂ ಒಮ್ಮತದಿಂದ ಮಸೂದೆ ತರಲಿ. ಜನರ ತೆರಿಗೆ ಹಣದಲ್ಲಿ ವೈಭವ ಅನುಭವಿಸುತ್ತಾ ಅದೇ ಜನರ ಸಂಕಷ್ಟದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ನಾಟಕ ಇನ್ನು ಸಾಕು. ಜನಪ್ರತಿನಿಧಿಗಳು ಜನರ ಸೇವೆ ಮಾಡಲು ಆಯ್ಕೆ ಆಗುತ್ತಾರೆ, ಜನರ ತೆರಿಗೆ ಹಣದಲ್ಲಿ ಚೀವನ ಪರ್ಯಂತ ವೈಭವ ಅನುಭವಿಸಲು ಅಲ್ಲ.
ಶ್ರೀಲಂಕಾವು ದಾರಿ ತೋರಿಸಿದೆ . ಈಗ ಭಾರತವೂ, ರಾಜ್ಯಗಳೂ ಜನರ ಹಣದ ಮೌಲ್ಯ ಅರಿತು
ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ ಎಂದು ಬೆಳ್ಳಿಪಾಡಿ ನೇಮಿರಾಜ್ ರೈ ತಿಳಿಸಿದ್ದಾರೆ.































































































































