
ಕಾರ್ಕಳದ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಸೆಪ್ಟೆಂಬರ್ 3ರಂದು ವಿವಿಧ ಅಂಗನವಾಡಿ ಪುಟಾಣಿಗಳು ಹಾಗೂ ಪೋಷಕರು, ಸೆಪ್ಟೆಂಬರ್ 4ರಂದು ಶಾಲಾ ಪುಟಾಣಿಗಳು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿದರು.
ಪುಟಾಣಿಗಳು ಕೃಷ್ಣನ ವೇಷಧರಿಸಿ ಮನಮೋಹಕ ನೃತ್ಯ ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು. ಮೊಸರು ಕುಡಿಕೆ, ಬೆಣ್ಣೆ ತಿನ್ನಿಸುವುದು ಹಾಗೂ ಶ್ರೀಕೃಷ್ಣನ ತೊಟ್ಟಿಲು ತೂಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು. ಮಕ್ಕಳಿಗೆ ಶ್ರೀಕೃಷ್ಣನ ಬಾಲಲೀಲೆಗಳ ಕಥೆಯನ್ನು ಮನೋಜ್ಞವಾಗಿ ತಿಳಿಸಲಾಯಿತು.
ತೀರ್ಪುಗಾರರಾಗಿ ಶ್ರೀಮತಿ ರಶ್ಮಿ ಭಟ್ ಹಾಗೂ ಶ್ರೀ ರಾಜ್ ಕಿರಣ್ ಅವರು ಆಗಮಿಸಿದರು. ಪೋಷಕರ ಸಹಕಾರ, ಶಿಕ್ಷಕರ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿಯ ಬೆಂಬಲದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಅರಿವು ಮೂಡಿಸಿದ ಈ ಜನ್ಮಾಷ್ಟಮಿ ಆಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.




































