
ಶ್ರೀ ಭುವನೇಂದ್ರ ಕಾಲೇಜಿನ ರಾ. ಸೇ. ಯೋ. ಘಟಕ ಮತ್ತು ವೈಗ್ಯಾನಿಕ್ ಇಂಡಿಯಾ ವತಿಯಿಂದ ಸ.ಹಿ.ಪ್ರಾ. ಶಾಲೆ ಜಾರ್ಕಳ – ಮುಂಡ್ಲಿ ಇಲ್ಲಿನ 5, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಋತುಚಕ್ರದ ಸಮಯದಲ್ಲಿ ಆರೋಗ್ಯ ನೈರ್ಮಲ್ಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ವೈಗ್ಯಾನಿಕ್ ಇಂಡಿಯಾ ಸಂಸ್ಥೆಯ ಸಹ ಸಂಸ್ಥಾಪಕಿ ರುಚಿತಾ ನಾರಾಯಣ್ ಇವರು ವಿದ್ಯಾರ್ಥಿನಿಯರಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭುವನೇಂದ್ರ ಕಾಲೇಜಿನ ರಾ. ಸೇ. ಯೋ. ಅಧಿಕಾರಿ ಶಂಕರ್ ಕುಡ್ವ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರತ್ನಮ್ಮ.ಎಸ್. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.



















































































