
ಸಾಣೂರು: ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನ ಸಾಣೂರು ವತಿಯಿಂದ ವಿದ್ಯಾರ್ಥಿಗಳು ಹಾಗೂ ಕನ್ನಡ ಸಾಹಿತ್ಯಾಸಕ್ತ ಬಂಧುಗಳಿಗಾಗಿ ಒಂದು ದಿನದ ಸಾಹಿತ್ಯ ರಚನಾ ಕಮ್ಮಟ ಹಾಗೂ ಸಾಹಿತ್ಯ ಸ್ಪರ್ಧೆಗಳನ್ನು ಸೆಪ್ಟೆಂಬರ್ 20ರಂದು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಾಹಿತ್ಯಾಸಕ್ತ ಬಂಧುಗಳು ಭಾಗವಹಿಸಬಹುದಾಗಿದೆ. ಸಾಹಿತ್ಯ ರಚನಾ ಕಮ್ಮಟವು ದಿನದ ಪೂರ್ವಾಹ್ನದ ಅವಧಿಯಲ್ಲಿ ನಡೆಯಲಿದ್ದು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಿರ್ದೇಶನ ನೀಡಲಾಗುತ್ತದೆ. ಅಪರಾಹ್ನದ ಅವಧಿಯಲ್ಲಿ ಆಶು ಕವಿತೆ, ಸಣ್ಣ ಕಥೆ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಸಂಸ್ಥೆಯ ವಿವಿಧ ತರಗತಿ ಕೊಠಡಿಗಳಲ್ಲಿ ನಡೆಸಲಾಗುತ್ತದೆ.
ವಿದ್ಯಾರ್ಥಿ ಕೇಂದ್ರಿತವಾಗಿ ನಡೆಯುವ ಈ ಸಾಹಿತ್ಯ ರಚನಾ ಕಮ್ಮಟ ಹಾಗೂ ಸಾಹಿತ್ಯ ಸ್ಪರ್ಧೆಗಳು ಪ್ರೌಢಶಾಲಾ, ಕಾಲೇಜು ಹಾಗು ಶಿಕ್ಷಕರನ್ನು ಒಳಗೊಂಡಂತೆ ಸಾಹಿತ್ಯಾಸಕ್ತರಿಗಾಗಿ ಮೂರು ಸ್ತರದಲ್ಲಿ ನಡೆಯಲಿದ್ದು ಪ್ರತಿಯೊಂದು ವಿಭಾಗಗಳಲ್ಲೂ ಪ್ರತ್ಯೇಕ ಬಹುಮಾನಗಳಿವೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನವೆಂಬರ್ ತಿಂಗಳಲ್ಲಿ ನಡೆಯುವ ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ವಿತರಿಸಲಾಗುತ್ತದೆ.
ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಸೆ. 15, 2026ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಸಂಪರ್ಕಕ್ಕಾಗಿ: 9019323906, 8105454926.




































