28.4 C
Udupi
Wednesday, September 9, 2026
spot_img
spot_img
HomeBlogರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ರಿ. ಕೆಮ್ಮಣ್ಣು ನಿಟ್ಟೆ

ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ರಿ. ಕೆಮ್ಮಣ್ಣು ನಿಟ್ಟೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ,38ನೇ ವರ್ಷದ ಮೊಸರು ಕುಡಿಕೆ

ರೋಟರಿ ಸಮುದಾಯ ದಳ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು, ನಿಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 38ನೇ ವರ್ಷದ ಮೊಸರು ಕುಡಿಕೆ ಸಾರ್ವಜನಿಕ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು, ನಿಟ್ಟೆ ಇಲ್ಲಿ ನಡೆಯಿತು.

ವಿವಿಧ ವಯೋಮಾನದವರಿಗೆ ನಾನಾ ರೀತಿಯ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆದಿದ್ದು, ಸರ್ವರ ಮನಸೂರೆಗೊಂಡಿತು. ಮುಖ್ಯ ಅಭ್ಯಾಗತರಾಗಿ ಮಾತೃ ಸಂಸ್ಥೆ ರೋಟರಿ ಕ್ಲಬ್ ನಿಟ್ಟೆ ಇದರ ಅಧ್ಯಕ್ಷರಾದ ರೊI ಶೈಲಜಾ ವಿ. ಶೆಟ್ಟಿ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ ಉಪಸ್ಥಿತರಿದ್ದು ಸಂದರ್ಭೋಚಿತ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ರೋಟರಿ ಸಮುದಾಯ ದಳದ ಸಭಾಪತಿ ಗೋಪಾಲಕೃಷ್ಣ ಎಸ್., ಹಿರಿಯ ರೋಟರಿ ಬಂಧು ಕೆ. ಅನಿಲ್ ಕುಮಾರ್ ಮತ್ತು ರೋಟರಿಯ ಹಿರಿಯ ಸದಸ್ಯರು ಹಾಗೂ ನಿಟ್ಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.
ರೋಟರಿ ಸಮುದಾಯ ದಳದ ಅಧ್ಯಕ್ಷ ಸುರೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.) ಕೆಮ್ಮಣ್ಣು, ನಿಟ್ಟೆ ಇದರ ಅಧ್ಯಕ್ಷ ಹಾಗೂ ಸ್ಥಳೀಯ ಪಂಚಾಯತ್ ಪ್ರತಿನಿಧಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. RCCಯ ಪೂರ್ವ ಜಿಲ್ಲಾ ಪ್ರತಿನಿಧಿ ವೆಂಕಟಕೃಷ್ಣ ಕುಮಾರ್ ಪ್ರಾಸ್ತಾವನೆಗೈದರು. ಇದೇ ಸಂದರ್ಭದಲ್ಲಿ SSLC ಹಾಗೂ PUCಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸ್ಥಳೀಯರಾದ ಜೀವನ್ ಕೆ.ಜೆ, ಶರಣ್ಯ ಪೂಜಾರಿ, ಸೌಮ್ಯ ಆಚಾರ್ಯ,
ಮತ್ತು ವೈಭವ್ ಮೂಲ್ಯರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಅದೇ ರೀತಿ ಸ್ಥಳೀಯ ಕ್ರೀಡಾ ಸಾಧಕರಾದ ಸ್ವಸ್ತಿಶ್ರೀ, ನಿಧೀಕ್ಷಾ, ಸುಜೀಕ್ಷಾ ಹೆಬ್ಬಾರ್ ಹಾಗೂ ಸುವಿನ್ ದೇವಾಡಿಗ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರನ್ನು ಸನ್ಮಾನಿಸಲಾಯಿತು. ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ, ಇತ್ತೀಚೆಗೆ ಪಿ ಎಚ್ ಡಿ ಪದವಿ ಪಡೆದ ಡಾ. ಅಂಕಿತಾ ಕೆ. ರಾವ್, ಕೃಷಿ ಮತ್ತು ಹೈನುಗಾರಿಕೆಯಲ್ಲಿ ವಿಶೇಷ ಸಾಧಕರಾದ ಗಂಗಾಧರ ಆಚಾರ್ಯ, ವೃತ್ತಿಯಲ್ಲಿ ಶಿಕ್ಷಕರು, ರಾಷ್ಟ್ರ ಪ್ರೇಮ ಸೃಜನಶೀಲ ರತ್ನ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಸುರೇಶ್, ಕೆಮ್ಮಣ್ಣು ನಿಟ್ಟೆ ಹಾಗೂ ಜಪಾನ್ ನ ಸಕುರ ವಿಜ್ಞಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಾಲ ಪ್ರತಿಭೆ ಕುಮಾರಿ ಮಾನ್ಯ ಶಂಕರ್ ಕೆಮ್ಮಣ್ಣು ಇವರನ್ನು ಸನ್ಮಾನಿಸಲಾಯಿತು. ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿಕಟ ಪೂರ್ವ ಉಪಪ್ರಾಂಶುಪಾಲರಾದ ಡಾ. ಶ್ರೀನಿವಾಸ್ ರಾವ್ ಬಿ. ಆರ್ ಹಾಗೂ ನಿಟ್ಟೆ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ಹೊಳ್ಳ ಮುದ್ದುಕೃಷ್ಣ ಸ್ಪರ್ಧೆ, ಮುಂಬೈ ಉದ್ಯಮಿ ದಿವಾಕರ ಶೆಟ್ಟಿ, ನರಂಗಬೆಟ್ಟು, ನಿಟ್ಟೆ ಇವರು ಉಪಹಾರ ವ್ಯವಸ್ಥೆ, ಜ್ಯೋತಿಷಿ ವೇದಮೂರ್ತಿ ಪ್ರಸನ್ನ ಆಚಾರ್ಯ ಸಿಹಿತಿಂಡಿ ವ್ಯವಸ್ಥೆ, ರಾಘವೇಂದ್ರ ಭಟ್ ನೆನಪಿನಲ್ಲಿ ಅವರ ಸುಪುತ್ರ ಅಕ್ಷಯ್ ಭಟ್ ಕೆಮ್ಮಣ್ಣು ಪಾನಕ ವ್ಯವಸ್ಥೆ ಹಾಗೂ ಕೆಮ್ಮಣ್ಣು ಕೊಪ್ಪಳ ಮನೆ ಕೀರ್ತಿಶೇಷ ರಾಮ್ ಭಟ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಹೀಗೆ ಹಲವು ಮಹನಿಯರು ಪ್ರಾಯೋಜಕರಾಗಿ ಸಹಕರಿಸಿದರು. ದುರ್ಗಾ ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಹಾಗೂ ರೋಟರಿ ಸಮುದಾಯ ದಳದ ಸದಸ್ಯರಾದ ಉಮೇಶ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್, ಶಂಕರ್ ಪೂಜಾರಿ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀಧರ ವಿ. ಆಚಾರ್ಯ ಹಾಗೂ ಕ್ಲಬ್ ನ ಉಪಾಧ್ಯಕ್ಷ ಕೃಷ್ಣಾನಂದ ರಾವ್ ಸನ್ಮಾನ ಪತ್ರ ವಾಚಿಸಿದರು. ವಿಠಲ್ ಆಚಾರ್ಯ, ಪ್ರಕಾಶ್ ಸಾಲ್ಯಾನ್ ಹಾಗೂ ರಾಜೇಶ್ ಮೂಲ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ರೋಟರಿ ಸಮುದಾಯ ದಳದ ಕಾರ್ಯದರ್ಶಿ ಪ್ರದೀಪ್ ಸುವರ್ಣ ವಂದಿಸಿದರು. ಪೂರ್ವಾಧ್ಯಕ್ಷ ಸತೀಶ್ ಶೆಟ್ಟಿ, ಅಗ್ಗ್ಯೊಟ್ಟು ಕಾರ್ಯಕ್ರಮ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page