30.2 C
Udupi
Wednesday, October 28, 2026
spot_img
spot_img
HomeBlogಶಬರಿಮಲೆ ಮಕರ ಜ್ಯೋತಿ ಯಾತ್ರೆ : ಅ.29ರಿಂದ ವರ್ಚುವಲ್ ಕ್ಯೂ ಬುಕಿಂಗ್ ಆರಂಭ

ಶಬರಿಮಲೆ ಮಕರ ಜ್ಯೋತಿ ಯಾತ್ರೆ : ಅ.29ರಿಂದ ವರ್ಚುವಲ್ ಕ್ಯೂ ಬುಕಿಂಗ್ ಆರಂಭ

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು ಮಕರವಿಳಕ್ಕು ಯಾತ್ರೆಯ ವರ್ಚುವಲ್ ಕ್ಯೂ ಬುಕಿಂಗ್ ಅಕ್ಟೋಬರ್ 29ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಯಾತ್ರೆಯ ಸಂದರ್ಭದಲ್ಲಿ ಭಕ್ತರ ದಟ್ಟಣೆ ನಿಯಂತ್ರಿಸಲು ಹಾಗೂ ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಲು ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ದರ್ಶನಕ್ಕೆ ತೆರಳುವ ಭಕ್ತರು ಮುಂಚಿತವಾಗಿ ವರ್ಚುವಲ್ ಕ್ಯೂ ಪಾಸ್ ಪಡೆಯುವುದು ಅಗತ್ಯವಾಗಿದೆ.

ಭಕ್ತರು ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್ sabarimalaonline.org ಮೂಲಕ ಟಿಕೆಟ್ ಕಾಯ್ದಿರಿಸಬಹುದು. ನೀಲಕ್ಕಲ್‌-ಪಂಬಾ ಮುಖ್ಯ ಮಾರ್ಗದಲ್ಲಿ ದಿನಕ್ಕೆ 60,000 ಭಕ್ತರಿಗೆ ದರ್ಶನದ ಅವಕಾಶವಿದ್ದು, ಎರುಮೇಲಿ ಅರಣ್ಯ ಮಾರ್ಗ ಹಾಗೂ ವಂಡಿಪೆರಿಯಾರ್‌-ಸತ್ರಂ ಮಾರ್ಗಗಳಲ್ಲಿ ತಲಾ 3,000 ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದವರಿಗಾಗಿ ಕೆಲವು ಪ್ರಮುಖ ಪ್ರದೇಶಗಳಲ್ಲಿ ಸ್ಪಾಟ್ ಬುಕಿಂಗ್ ಕೇಂದ್ರಗಳನ್ನೂ ತೆರೆಯಲಾಗುತ್ತಿದೆ. ನೀಲಕ್ಕಲ್‌ನಲ್ಲಿ ದಿನಕ್ಕೆ 10,000, ಎರುಮೇಲಿಯಲ್ಲಿ 2,000 ಹಾಗೂ ವಂಡಿಪೆರಿಯಾರ್‌-ಸತ್ರಂನಲ್ಲಿ 2,000 ಭಕ್ತರಿಗೆ ಟಿಕೆಟ್ ಸೌಲಭ್ಯವಿರುತ್ತದೆ. ಆದರೆ, ಕೇರಳ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಂಬಾದ ಸ್ಪಾಟ್ ಬುಕಿಂಗ್ ಕೇಂದ್ರವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಭಕ್ತರು ಪ್ರಯಾಣಕ್ಕೂ ಮುನ್ನವೇ ಟಿಕೆಟ್ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ವರ್ಚುವಲ್ ಕ್ಯೂ ಪಾಸ್ ಸಂಪೂರ್ಣ ಉಚಿತವಾಗಿದ್ದು, ಭಕ್ತರು ಬಯಸಿದರೆ ಯಾತ್ರಿಕರ ಪರಿಹಾರ ನಿಧಿ ಅಥವಾ ಸಾಮಾನ್ಯ ನಿಧಿಗೆ ಕನಿಷ್ಠ 5 ರೂ. ದೇಣಿಗೆ ನೀಡಬಹುದು. ಈ ಮೊತ್ತವನ್ನು ದೇವಾಲಯದ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಗಳಿಗೆ ಬಳಸಲಾಗುತ್ತದೆ. ದೇಣಿಗೆ ನೀಡುವುದು ಕಡ್ಡಾಯವಲ್ಲ.

ಬುಕಿಂಗ್‌ಗೆ ಅಗತ್ಯವಾದ ದಾಖಲೆಗಳು:

ನೋಂದಣಿಗಾಗಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್‌ನಂತಹ ಗುರುತಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜೊತೆಗೆ, 30 ಕೆಬಿಗಿಂತ ಕಡಿಮೆ ಗಾತ್ರದ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವೂ ಅಗತ್ಯವಿದೆ.

ವರ್ಚುವಲ್ ಕ್ಯೂ ಪಾಸ್ ಪಡೆಯುವ ವಿಧಾನ:

ಹೊಸ ಬಳಕೆದಾರರು ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ಒಟಿಪಿ ಮೂಲಕ ಖಾತೆ ದೃಢೀಕರಿಸಿದ ಬಳಿಕ ಲಾಗಿನ್ ಆಗಿ ವೈಯಕ್ತಿಕ ವಿವರಗಳು, ಗುರುತಿನ ದಾಖಲೆ ಮತ್ತು ಫೋಟೋ ಅಪ್‌ಲೋಡ್ ಮಾಡಬೇಕು. ನಂತರ ‘Virtual Queue’ ಆಯ್ಕೆ ಮಾಡಿಕೊಂಡು ದರ್ಶನದ ದಿನಾಂಕ, ಸಮಯ ಹಾಗೂ ಮಾರ್ಗವನ್ನು ಆರಿಸಿ ಬುಕಿಂಗ್ ಪೂರ್ಣಗೊಳಿಸಬೇಕು. ಬಳಿಕ ಲಭ್ಯವಾಗುವ ಕ್ಯೂಆರ್ ಕೋಡ್ ಹೊಂದಿರುವ ಪಾಸ್‌ ಅನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ

ಭಕ್ತರು ಟಿಕೆಟ್ ಕಾಯ್ದಿರಿಸಲು ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಬೇಕು. ವರ್ಚುವಲ್ ಕ್ಯೂ ಪಾಸ್ ಉಚಿತವಾಗಿರುವುದರಿಂದ ಹಣ ಕೇಳುವ ನಕಲಿ ವೆಬ್‌ಸೈಟ್‌ಗಳು ಹಾಗೂ ಮಧ್ಯವರ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರಯಾಣ ಆರಂಭಿಸುವ ಮೊದಲು ಪಾಸ್‌ನಲ್ಲಿರುವ ದರ್ಶನದ ದಿನಾಂಕ, ಸಮಯ ಮತ್ತು ಮಾರ್ಗದ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page