31.4 C
Udupi
Sunday, April 26, 2026
spot_img
spot_img
HomeBlogRSS ನಿಷೇಧಿಸುವ ಬಗ್ಗೆ ಕಾಂಗ್ರೆಸ್ಸಿಗರ ಹೇಳಿಕೆಯ ಬಗ್ಗೆ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರು ತಮ್ಮ ಪರ...

RSS ನಿಷೇಧಿಸುವ ಬಗ್ಗೆ ಕಾಂಗ್ರೆಸ್ಸಿಗರ ಹೇಳಿಕೆಯ ಬಗ್ಗೆ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರು ತಮ್ಮ ಪರ – ವಿರೋಧ ನಿಲುವನ್ನು ಸ್ಪಷ್ಟಪಡಿಸಲಿ”- ರವೀಂದ್ರ ಮೊಯ್ಲಿ, ವಕ್ತಾರರು ಭಾರತೀಯ ಜನತಾಪಾರ್ಟಿ ಕಾರ್ಕಳ

ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷದ ಇತಿಹಾಸವಿರುವ ರಾಷ್ಟ್ರೀಯ ವಿಚಾರಧಾರೆ ಹೊತ್ತ ದೇಶ ಭಕ್ತರ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಕರ ಸಂಘ. ರಾಷ್ಟ್ರೀಯ ವಿಚಾರ ಧಾರೆಯ ಸಂಘಟನೆ ಬೆಳೆದರೆ ಮುಂದೊಂದು ದಿನ ಕಾಂಗ್ರೆಸ್ಸಿಗೆ ತೊಡಕಾಗಲಿದೆ ಎಂಬ ಕಾರಣದಿಂದ ಇದನ್ನು ನಿಷೇಧಿಸಬೇಕೆಂಬ ಪ್ರಯತ್ನ ಕಾಂಗ್ರೇಸ್ ನ ಜವಾಹರಲಾಲ್ ನೆಹರು ರವರ ಕಾಲದಲ್ಲಿಯೇ ಆರಂಭವಾಗಿತ್ತು. ಆದರೆ ಆ ಎಲ್ಲಾ ಪ್ರಯತ್ನಗಳೂ ವ್ಯರ್ಥ ವಾಗಿತ್ತು. ಆರ್ ಎಸ್ ಎಸ್ ನಂತಹ ರಾಷ್ಟ್ರಭಕ್ತ ಸಂಘಟನೆಯನ್ನು ನಿಷೇಧಿಸುವುದು ಅಸಾಧ್ಯದ ಮಾತು. ಇದೀಗ ತಂದೆಯ ಕೋಟಾದಡಿ ಮಂತ್ರಿಸ್ಥಾನ ಗಿಟ್ಟಿಸಿಕೊಂಡರುವ ಸಂಘದ ಬಗ್ಗೆ ತಿಳುವಳಿಕೆ ಇಲ್ಲದ ಸಂಘದ ವಿಸ್ತಾರದ ಅರಿವಿಲ್ಲದ ಪ್ರಿಯಾಂಕ ಖರ್ಗೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸುವ ಬಗ್ಗೆ ಬೇಜವಾಬ್ದಾರಿ ಮತ್ತು ಉದ್ದಟತನದ ಹೇಳಿಕೆ ನೀಡಿ ಜನತೆಗೆ ತಮ್ಮ ಬುದ್ದಿಮತ್ತೆಯನ್ನು ತೋರ್ಪಡಿಸಿ ಅಪಹಾಸ್ಯಕ್ಕೊಳಗಾಗಿದ್ದಾರೆ.ಇದೀಗ ಅವರದೇ ನೆರಳಲ್ಲಿ ಸಾಗುತ್ತಿರುವ ಮಂಜುನಾಥ ಭಂಡಾರಿಯವರು ಕೂಡಾ ಅರ್ ಎಸ್ ಎಸ್ ನಿಷೇಧದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುತ್ತಾರೆ. ಅವರು ಹೇಳಿಕೆ ನೀಡುವ ಸಮಯದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ಸಿನ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರು ಈ ಹಿಂದೆ ಭಾರತೀಯ ಜನತಾಪಾರ್ಟಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಯ ನಾಯಕರುಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದ ತಾವು ಆ ನಂತರ ಕಾಂಗ್ರೆಸ್ಸಿನ ಟಿಕೇಟು ಪಡೆದು ಚುನಾವಣೆ ಎದುರಿಸಿ ಜನರ ವಿಶ್ವಾಸ ಪಡೆಯುವಲ್ಲಿ ವಿಫಲರಾದಿರಿ.
ಮಾನ್ಯ ಭಂಡಾರಿಯವರೇ ನೀವು ನೇರ ಚುನಾವಣೆ ಎದುರಿಸಿ ಗೆಲ್ಲಲಾಗದೆ ಹಿಂಬಾಗಿಲಿನ ಮೂಲಕ ಶಾಸಕರಾದವರು ತಿಳಿದಿರಲಿ. ನಿಮ್ಮ ಪಕ್ಕದಲ್ಲಿ ಕುಳಿತಿರುವ ಕಾರ್ಕಳ ಕಾಂಗ್ರೆಸ್ಸಿನ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರು ಸಂಘಕ್ಕೆ ಅಪ್ಪ್ಯಾಯಮಾನವಾದ ಕೇಸರಿ ಹಾಕಿ ತಿರುಗಿದವರು.
ನೀವು ಮಾನ್ಯ ಭಂಡಾರಿಯವರ ಪಕ್ಕದಲ್ಲಿ ಕೂತು RSS ನಿಷೇಧ ಮಾಡ್ತೇವೆ ಅಂತ ಹೇಳ್ತೀರಾ..? ಸಂಘದ ಬಗೆಗಿನ ನಿಮ್ಮ ತಟಸ್ಥ ನಿಲುವನ್ನು ಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸಬೇಕೇನ್ನುವ ಬೆರಳೆಣಿಕೆಯ ಕಾಂಗ್ರೆಸ್ಸಿನ ನಾಯಕರೆನಿಸಿಕೊಂಡವರ ಹೇಳಿಕೆಯ “ಪರ” ಯಾ “ವಿರೋಧ”ದ ಇದ್ದಿರಾ.. ಸ್ಪಷ್ಟ ಪಡಿಸಿ.
“ಸಂಘ ಸರ್ವವ್ಯಾಪಿ, ಸರ್ವಸ್ಪರ್ಶಿ” ಧೋರಣೆಯದ್ದು..ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page