5 ವರ್ಷಗಳ ನಂತರ ನ್ಯಾಯಾಲಯದಲ್ಲಿ ಜಯ…!*

2021ನೇ ಇಸವಿಯಲ್ಲಿ ಕಾರ್ಕಳದ ನಕ್ರೆ ಆನಂದಿ ಮೈದಾನದಲ್ಲಿ ನಡೆದ ಅನಧಿಕೃತ ಮತಾಂತರ ಕೇಂದ್ರದ ವಿರುದ್ಧ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹೋರಾಟ ನಡೆಸಿದ್ದರು. ಐದು ವರ್ಷಗಳ ನಂತರ ಹಿಂದೂ ಜಾಗರಣ ವೇದಿಕೆಯ ಮುಖಂಡರಿಗೆ ಕಾನೂನು ಹೋರಾಟದಲ್ಲಿ ಜಯ ದೊರೆತಿದೆ.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಗುರುಪ್ರಸಾದ್ ನಾರಾವಿ, ಪ್ರಕಾಶ್ ಕುಕ್ಕೆಹಳ್ಳಿ, ರಮೇಶ್ ಶೆಟ್ಟಿ, ಪ್ರಶಾಂತ್ ನಾಯಕ್, ಸುನಿಲ್ ಗುಂಡಾಜೆ, ಸಂದೀಪ್ ಕಾರ್ಲಾ, ಸುಜಿತ್ ಸಫಾಲಿಗ ಹಾಗೂ ಉಮೇಶ್ ರಂಗಣ್ಣಪಾಲಿಕೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಾರ್ಕಳದ ವಕೀಲರಾದ ಮಣಿರಾಜ್ ಶೆಟ್ಟಿ ಮತ್ತು ಸುನಿಲ್ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದರು.






















































































