27.3 C
Udupi
Monday, November 16, 2026
spot_img
spot_img
HomeBlogಫೆಬ್ರವರಿ ತಿಂಗಳ ತಿರುಮಲ ದರ್ಶನ ಟಿಕೆಟ್‌ ಬಿಡುಗಡೆ ವೇಳಾಪಟ್ಟಿ ಪ್ರಕಟ: ನ.18ರಿಂದ ಆನ್‌ಲೈನ್ ಬುಕ್ಕಿಂಗ್ ಆರಂಭ

ಫೆಬ್ರವರಿ ತಿಂಗಳ ತಿರುಮಲ ದರ್ಶನ ಟಿಕೆಟ್‌ ಬಿಡುಗಡೆ ವೇಳಾಪಟ್ಟಿ ಪ್ರಕಟ: ನ.18ರಿಂದ ಆನ್‌ಲೈನ್ ಬುಕ್ಕಿಂಗ್ ಆರಂಭ

ತಿರುಮಲ: ಮುಂಬರುವ ಫೆಬ್ರವರಿ ತಿಂಗಳ ಶ್ರೀವಾರಿ ದರ್ಶನ, ಅರ್ಜಿತ ಸೇವೆಗಳು ಹಾಗೂ ವಸತಿ ಕೊಠಡಿಗಳ ಆನ್‌ಲೈನ್ ಕೋಟಾ ಬಿಡುಗಡೆ ದಿನಾಂಕಗಳನ್ನು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತ ಮಂಡಳಿ ಪ್ರಕಟಿಸಿದೆ. ನವೆಂಬರ್ 18ರಿಂದ 24ರವರೆಗೆ ಹಂತ ಹಂತವಾಗಿ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಭಕ್ತರು ನಿಗದಿತ ಸಮಯದಲ್ಲಿ ಕಾಯ್ದಿರಿಸಿಕೊಳ್ಳಬಹುದು.

ಸುಪ್ರಭಾತ, ಅರ್ಚನ ಮತ್ತು ಅಷ್ಟದಳ ಪಾದಪದ್ಮಾರಾಧನೆ ಸೇವೆಗಳ ಟಿಕೆಟ್‌ಗಳು ನವೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿವೆ. ಲಕ್ಕಿ ಡಿಪ್‌ಗಾಗಿ ನವೆಂಬರ್ 20ರ ಬೆಳಿಗ್ಗೆ 10 ಗಂಟೆಯವರೆಗೆ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದವರು ನವೆಂಬರ್ 22ರ ಮಧ್ಯಾಹ್ನ 12 ಗಂಟೆಯೊಳಗೆ ಶುಲ್ಕ ಪಾವತಿಸಿ ಟಿಕೆಟ್ ಖಚಿತಪಡಿಸಿಕೊಳ್ಳಬೇಕು.

ಕಲ್ಯಾಣೋತ್ಸವ, ಊಂಜಲ್ ಸೇವೆ, ಅರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಗಳ ಟಿಕೆಟ್‌ಗಳು ನವೆಂಬರ್ 21ರಂದು ಬೆಳಿಗ್ಗೆ 10 ಗಂಟೆಗೆ ಲಭ್ಯವಾಗಲಿವೆ. ಅಂದು ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳು ಮತ್ತು ದರ್ಶನ ಸ್ಲಾಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ನವೆಂಬರ್ 23ರಂದು ಬೆಳಿಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣಾ ಟೋಕನ್‌ಗಳು ಹಾಗೂ 11 ಗಂಟೆಗೆ ಶ್ರೀವಾಣಿ ಟ್ರಸ್ಟ್ ದರ್ಶನ ಟಿಕೆಟ್‌ಗಳು ಬಿಡುಗಡೆಯಾಗಲಿವೆ. ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಉಚಿತ ವಿಶೇಷ ದರ್ಶನ ಟೋಕನ್‌ಗಳು ಮಧ್ಯಾಹ್ನ 3 ಗಂಟೆಗೆ ಲಭ್ಯವಾಗಲಿವೆ.

ಭಕ್ತರು ಹೆಚ್ಚು ನಿರೀಕ್ಷಿಸುವ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ನವೆಂಬರ್ 24ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯ ವಸತಿ ಕೊಠಡಿಗಳ ಆನ್‌ಲೈನ್ ಕೋಟಾ ತೆರೆಯಲಿದೆ.

ಇದೇ ವೇಳೆ, ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಟಿಟಿಡಿ ಮನವಿ ಮಾಡಿದೆ. ಟಿಕೆಟ್ ಹಾಗೂ ವಸತಿ ಕೊಠಡಿಗಳ ಕಾಯ್ದಿರಿಸುವಿಕೆಗೆ ಅಧಿಕೃತ ವೆಬ್‌ಸೈಟ್ https://ttdevasthanams.ap.gov.in ಅನ್ನು ಮಾತ್ರ ಬಳಸುವಂತೆ ಸೂಚಿಸಿದೆ.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page