
ಬಾಗಲಕೋಟೆ: ಬಾಗಲಕೋಟೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲಸಂಗಮದಲ್ಲಿ ಮಾತನಾಡಿ ಒಬ್ಬ ನಾಗೇಂದ್ರ ರಾಜೀನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಗಾಬರಿಯಾಗಬೇಕಿಲ್ಲ. ಅವರ ಯಾತ್ರೆ ನಡೆದಂತೆ ನಮ್ಮ ಯಾತ್ರೆಯೂ ನಡೆಯುತ್ತದೆ. ನಾಗೇಂದ್ರನ ಕೊಡಿಸಿಬಿಟ್ಟೇವು, ಒಂದು ನಾಗೇಂದ್ರ ರಾಜೀನಾಮೆ ಕೊಟ್ಟರೇನು? ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗೇಂದ್ರ ಅವರಂತಹ 100 ಪಟ್ಟು ಶಕ್ತಿ ತುಂಬುವ ಸಾಮರ್ಥ್ಯ ನಮ್ಮ ಸರ್ಕಾರದಲ್ಲಿದೆ.‘ನನ್ನಿಂದ ಸದನ ಹಾಳಾಯಿತು’ ಎಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಪಾಪ.. ಅವರ ಗುರಿ ಏನೆಂದರೆ ಯಾರು ಸ್ಟ್ರಾಂಗ್ ಆಗಿ ಕೆಲಸ ಮಾಡುತ್ತಾರೆ ಎಂಬುದನ್ನು ನೋಡುವುದು.
ನಾನು ಆಗಾಗ ಹೇಳುತ್ತಿರುತ್ತೇನೆ ‘ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್’ ಅಂತಾ, ಯಾರು ಸ್ಟ್ರಾಂಗ್ ಆಗಿ ಕೆಲಸ ಮಾಡುತ್ತಾರೆ, ಅವರ ಮೇಲೆಯೇ ಕಣ್ಣು ಬಿದ್ದಿರುತ್ತದೆ ಎಂದು ಹೇಳಿದರು.




































