
ನವದೆಹಲಿ: ದೇಶಾದ್ಯಂತ ಇಂದಿನಿಂದ ಸತತ ನಾಲ್ಕು ದಿನ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಬ್ಯಾಂಕ್ ನೌಕರರ ಮುಷ್ಕರದ ಜೊತೆಗೆ ಸರಣಿ ರಜೆಗಳು ಬಂದಿರುವುದರಿಂದ ಶಾಖೆಗಳು ಬಂದ್ ಆಗಲಿವೆ. ತುರ್ತು ಬ್ಯಾಂಕಿಂಗ್ ಕೆಲಸಗಳಿರುವವರು ಮಂಗಳವಾರದವರೆಗೆ ಕಾಯಬೇಕಾಗಿದ್ದು, ಆನ್‌ಲೈನ್ ಸೇವೆ ಬಳಸುವಂತೆ ಸೂಚಿಸಲಾಗಿದೆ.
ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ ಹಾಗೂ ಪಿಂಚಣಿ ಸುಧಾರಣೆಗೆ ಒತ್ತಾಯಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ. ಸೆ.12ರಂದು ಎರಡನೇ ಶನಿವಾರ, ಸೆ.13ರಂದು ಭಾನುವಾರ ಹಾಗೂ ಸೆ.14ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಚೆಕ್ ಕ್ಲಿಯರೆನ್ಸ್, ಡಿಡಿ ಪಡೆಯುವುದು ಮತ್ತು ನಗದು ವಹಿವಾಟಿನಂತಹ ಶಾಖಾ ಸೇವೆಗಳು ಮಂಗಳವಾರದಿಂದ ಪುನರಾರಂಭವಾಗಲಿವೆ. ಆದರೆ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ UPI ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಸತತ ರಜೆ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿರುವವರು ಮುಂಚಿತವಾಗಿ ಹಣ ಪಡೆಯುವುದು ಸೂಕ್ತ.




































