
ಭಾರತೀಯ ಭೂಸೇನೆಯಲ್ಲಿ ಮೇಜರ್ ಆಗಿ, ಡೆಂಟಲ್ ಮೆಡಿಕಲ್ ಆಫೀಸರ್ ಆಗಿ ಕಳೆದ 5 ವರ್ಷ ಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ಸೇವೆಯಿಂದ ನಿವೃತ್ತಿ ಹೊಂದಿದ ಕಾರ್ಕಳ ತಾಲೂಕು ಮುಡಾರು ಗ್ರಾಮದ ಹೆಮ್ಮೆಯ ಸಹನಾ ರವರಿಗೆ ಅಭಿನಂದನೆಗಳು ಹಾಗೂ ಮುಂದಿನ ಜೀವನ ಉಜ್ವಲವಾಗಲಿ.(ಇವರು ಕಾರ್ಕಳ ತಾಲೂಕು, ಮುಡಾರು ಗ್ರಾಮದ ಶೇನರಬೆಟ್ಟು ಬ್ರಹ್ಮಾನಂದ ಕಾಮತ್ ಹಾಗೂ ಜಯಶ್ರೀ ರವರ ಪುತ್ರಿ ಯಾಗಿದ್ದು, ಬೆಂಗಳೂರಿನ ಡಾಕ್ಟರ್ ಸಚಿನ್ ರವರ ಪತ್ನಿಯಾಗಿರುತ್ತಾರೆ.)

ಈ ಸನ್ಮಾನ ಕಾರ್ಯದಲ್ಲಿ ನವಚೇತನ ತಂಡದ ಸ್ಥಾಪಕರಾದ ಸುಕೇಶ್ ಜಿ ಅಂಚನ್ ತೋಡಾರು, ಅಧ್ಯಕ್ಷರು ಆದ ಕಿರಣ್ ಕುಲಾಲ್ ಸಾಣೂರು, ಸದಸ್ಯರು ಆಗಿರುವ ರಜತ್ ರಾಮ್ ಬಜಗೋಳಿ, ವಿಶಾಲ್ ಸಾಲ್ಯಾನ್ ಬೋಳ, ತಂಡದ ಹಿತೈಷಿಗಳಾದ ಜಯರಾಮ್ ಸಾಲ್ಯಾನ್ ಬೋಳ ಉಪಸ್ಥಿತರಿದ್ದರು




































