ಸ.ಕಿ.ಪ್ರಾ. ಶಾಲೆ ಪೆರಲ್ದಬೆಟ್ಟುವಿನಲ್ಲಿ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕಿ ಅನಿತಾ ಹೆಗ್ಡೆ ಬೀಳ್ಕೊಡುಗೆ ಸಮಾರಂಭ

ಕಾರ್ಕಳ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 10 ನೇ ವರ್ಷದ ಮೊಸರು ಕುಡಿಕೆ ಹಾಗೂ ,ಸ.ಕಿ.ಪ್ರಾ. ಶಾಲೆ ಪೆರಲ್ದಬೆಟ್ಟುವಿನಲ್ಲಿ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕಿ ಅನಿತಾ ಹೆಗ್ಡೆ ಇವರ ಬೀಳ್ಕೊಡುಗೆ ಸಮಾರಂಭ ಸೆ. 06 ಪೆರಲ್ದಬೆಟ್ಟು ಶಾಲಾ ವಠಾರದಲ್ಲಿ ನಡೆಯಿತು.ಮುದ್ದು ಕೃಷ್ಣ ಹಾಗೂ ವಿವಿಧ ಸ್ಪರ್ಧೆಗಳು ನಡೆದು ಸಂಜೆ 5.00 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ದಿವಾಕರ ಶೆಟ್ಟಿ ವಹಿಸಿದರು.ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾ.ಪಂ ಅಧ್ಯಕ್ಷ ರಮೇಶ್ ವಿ.ಶೆಟ್ಟಿ ಮುಖ್ಯ ಶಿಕ್ಷಕ ಹರೇಂದ್ರ ರಾವ್,ಗೀತಾಚಂದ್ರ ಆಚಾರ್ಯ, ರೆಂಜಾಳ ಶಾಲಾ ಶಿಕ್ಷಕಿ ಮಲ್ಲಿಕಾ ಜೈನ್ ,ರಮೇಶ್ ಶೆಟ್ಟಿ , ಮಂಜೊಟ್ಟು,ಸಂಪತ್ ಜೈನ್,ನಾಗಪ್ಪ ಮೇರ ,ರವಿಚಂದ್ರ ಜೈನ್,ಸದಾಶಿವ ಹೆಗ್ಡೆ,ಅನಿತಾ ಹೆಗ್ಡೆ ಅಂಗನವಾಡಿ ಶಿಕ್ಷಕಿ ಅನಿತಾ ಶೆಟ್ಟಿ ,ಶಿಕ್ಷಕಿ ಅಶ್ವಿನಿ ಎಸ್ ಡಿ ಎಂ ಸಿ ಅಧ್ಯಕ್ಷೆ ಸರಸ್ವತಿ ದೇವಾಡಿಗ, ಉಪಸ್ಥಿತರಿದ್ದರು.ಕಾರ್ಯದರ್ಶಿ ಸಂತೋಷ್ ಸ್ವಾಗತಿಸಿ ಆನಂದ್ ಕೋಟ್ಯಾನ್ ಸನ್ಮಾನ ಪತ್ರ ವಾಚಿಸಿ ,ವೈಷ್ಣವಿ ಆಚಾರ್ಯ ಹಾಗೂ ರಕ್ಷಾ ದೇವಾಡಿಗ ಬಹುಮಾನಿತರ ಪಟ್ಟಿ ವಾಚಿಸಿದರು ಹಳೇ ವಿದ್ಯಾರ್ಥಿಗಳು ಸಮಿತಿ ಸದಸ್ಯರೆಲ್ಲರ ಸಹಕಾರ ದೊಂದಿಗೆ ನಡೆದ ಕಾರ್ಯಕ್ರಮ,ಆರಾಧ್ಯ ಆಚಾರ್ಯ ಪ್ರಾರ್ಥಿಸಿ,ದಿನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸುವು ದರೊಂದಿಗೆ ಮುಕ್ತಾಯಗೊಂಡಿತು.






































