29.9 C
Udupi
Monday, November 16, 2026
spot_img
spot_img
HomeBlogಮಣಿಪಾಲ: ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ

ಮಣಿಪಾಲ: ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟ

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು
ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕ
ಕ್ರೀಡಾಕೂಟ ಉದ್ಘಾಟನೆಯು 15 ನವೆಂಬರ್ ರಂದು ವಿದ್ಯಾ ನಗರ
ಗ್ರೀನ್ಸ್ ನಲ್ಲಿ ನಡೆಯಿತು.


ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ಮಧು ಜಿ.
ಪ್ರಾಂಶುಪಾಲರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಮೂಡುಬಿದಿರೆ
ಇವರು ಮಾತನಾಡಿ ಮನುಷ್ಯನ ಮಾನಸಿಕ ಮತ್ತು ಶಾರೀರಿಕ
ಸ್ವಾಸ್ಥ್ಯವನ್ನು ಕಾಪಾಡಲು ಕ್ರೀಡೆ ಅತ್ಯಂತ
ಉಪಯುಕ್ತವಾಗಿದ್ದು, ಶೈಕ್ಷಣಿಕವಾಗಿ ಉತ್ತಮ ಏಳ್ಗೆಯನ್ನು,
ದೂರದೃಷ್ಟಿ, ಏಕಾಗ್ರತೆ, ದೃಢ ಮನೋಭಾವನೆ,
ಆತ್ಮವಿಶ್ವಾಸದ ಗುಣಗಳನ್ನು ಕ್ರೀಡಾಪಟುಗಳಲ್ಲಿ
ಬೆಳೆಸುತ್ತದೆ. ಈ ಎಲ್ಲಾ ಗುಣಗಳೊಂದಿಗೆ ಶಿಸ್ತುಬದ್ಧ
ಜೀವನವನ್ನು ನಡೆಸಿಕೊಂಡು ಹೋಗುವಲ್ಲಿ ಕ್ರೀಡೆ
ಪ್ರಮುಖವಾಗಿದ್ದು, ನಿಮ್ಮನ್ನು ಆಟಗಳಲ್ಲಿ ತೊಡಗಿಸಿಕೊಂಡು
ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ ಹಾಗೂ ಇಂದಿನ ಕ್ರೀಡೆಯಲ್ಲಿ
ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನವೀನ್
ಶೆಟ್ಟಿ, ಹಿರಿಯ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಮತ್ತು
ತರಬೇತುದಾರರು ಇವರು ಮಾತನಾಡಿ, ಉತ್ತಮ
ಕ್ರೀಡಾಪಟುಗಳಾಗಬೇಕೆಂಬ ಮಹತ್ವಾಕಾಂಕ್ಷೆ ಇರುವವರು
ಪ್ರಮುಖವಾಗಿ ವಿನಯತೆ, ಬದ್ಧತೆ, ಸಮರ್ಪಣಾ ಗುಣಗಳನ್ನು
ಬೆಳೆಸಿಕೊಳ್ಳಬೇಕಾದದ್ದು ಬಹಳ ಮುಖ್ಯ. ಇಲ್ಲವಾದಲ್ಲಿ ಅತೀ
ದೊಡ್ಡ ಸಾಧನೆಯ ಗುರಿ ಏರಿದರೂ ಸುದೀರ್ಘವಾಗಿ ಅದರಲ್ಲಿ
ಮುಂದುವರಿಯಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರದಲ್ಲಿ
ಸಾಧಕರಾಗಬೇಕಾದರೂ ಅದಕ್ಕೆ ಕಾರಣೀಕರ್ತರಾದ
ಗುರುವನ್ನು, ಬೆಂಬಲಿಗರನ್ನು ಮರೆಯದೇ ವಿಧೇಯತೆಯ
ಪ್ರತೀಕವಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು
ಎಂದರು.
ಮಣಿಪಾಲ ಜ್ಞಾನಸುಧಾ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ
ಸಂಸ್ಥೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ
ಮುನ್ನಡೆಸುವ “ಗಳಿಕೆ ಮತ್ತು ಕಲಿಕೆ” ಎಂಬ ಶೀರ್ಷಿಕೆಯ ಬಿಸಿನೆಸ್
ಫೇರ್‌ನ್ನು ನಡೆಸಲಾಯಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಶ್ರೀ ವಿಲ್ಸನ್ ಡಿಕೋಸ್ಟ ಅವರು ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ
ಭಾಗವಹಿಸಿರುವ ಕ್ರೀಡಾಪಟುಗಳು ಸೋತಿರಬಹುದು ಅಥವಾ ಗೆದ್ದಿರಬಹುದು ಆದರೆ ಪ್ರತಿಯೊಬ್ಬರಲ್ಲೂ ಒಂದು ಪಟ್ಟು
ಸಾಮರ್ಥ್ಯ ಹೆಚ್ಚಾಗಿದೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ
ಮನೋಭಾವನೆ ಹೆಚ್ಚಿದೆ, ಇದೇ ರೀತಿ ಇನ್ನು ಮುಂದಿನ
ದಿನಗಳಲ್ಲಿಯೂ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಅದರಿಂದ
ಉತ್ತಮ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಿ ಎಂದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಆಟಗಳಲ್ಲಿ ಭಾಗವಹಿಸಿದ
ಉಪನ್ಯಾಸಕರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ
ಗಣ್ಯರನ್ನು ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜಿನ
ಪ್ರಾಂಶುಪಾಲರಾದ ಗಣೇಶ ಶೆಟ್ಟಿ ಇವರು ಸ್ವಾಗತಿಸಿದರು.
ಉಪಪ್ರಾಂಶಪಾಲರುಗಳಾದ ರವಿ. ಜಿ, ಹೇಮಂತ ಹಾಗೂ ನವೀನ್. ಎ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರಾದ
ಅರುಣ್ ಕುಮಾರ್ ಮತ್ತು ಶ್ರೀ ಜಯರಾಜ್ ಉಡುಪಿ ಜ್ಞಾನಸುಧಾ
ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್
ಇವರು ಉಪಸ್ಥಿತರಿದ್ದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ
ಶ್ರೀಮತಿ ಶಮಿತಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page