27.2 C
Udupi
Tuesday, September 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 648

ಭರತೇಶ್ ಶೆಟ್ಟಿ , ಎಕ್ಕಾರು

ಹಿಂದೊಮ್ಮೆ “ಉಪರಿಚರವಸು” ಎಂಬವನು ಇಂದ್ರಾನುಗ್ರಹದಿಂದ ಒಂದು ದಿವ್ಯ ವಿಮಾನ ಹೊಂದಿದ್ದನು. ಅದರಲ್ಲಿ ಕುಳಿತು ತ್ರಿಲೋಕ ಸಂಚಾರ ಮಾಡುತ್ತಿದ್ದನು. ಹೀಗಿರಲು ಒಂದು ದಿನ ಸ್ವರ್ಗದ ಭೋಗ ಭಾಗ್ಯ ಸಂಭ್ರಮಿಸಿ ತಲ್ಲಿನನಾಗಿದ್ದವ ಥಟ್ಟನೆ ಭೂಲೋಕದೆಡೆ ಸಂಚಾರ ಹೊರಟು ಭೂ ವಾತಾವರಣ ಸೇರಿದಾಗ ಸಂಪೂರ್ಣ ಬೆವತು ಹೋದನು. ಪರಿಣಾಮ ಅವನ ಶಕ್ತಿಪಾತ (ವೀರ್ಯ ಸ್ಖಲನ) ವಾಯಿತು. ಅದು ಯಮುನಾ ತೀರದಲ್ಲಿದ್ದ ಪಕ್ಷಿಯೊಂದರ ಕೊಕ್ಕಿನ ಮೇಲೆ ಬಿದ್ದು, ಪಕ್ಷಿ ಕೊಡವಿ ಚಿಮ್ಮಿದಾಗ ಯಮುನಾ ನದಿಯ ನೀರಿಗೆ ಬಿದ್ದು ಬಿಟ್ಟಿತು. ಅದೇ ನದಿ ನೀರಿನಲ್ಲಿ ಬ್ರಹ್ಮ ಶಾಪದಿಂದ ಅದ್ರಿಕೆ ಯೆಂಬ ಅಪ್ಸರೆ ಮೀನಾಗಿದ್ದಳು. ಅವಳು ಹೀಗೆ ಚಿಮ್ಮಿದ ಜೀವಧಾತುವನ್ನು ನುಂಗಿ ಬಿಟ್ಟಳು. ಕಾಲಚಕ್ರ ತಿರುಗಿತ್ತಿರಲು ಮೀನಾಗಿದ್ದ ಅವಳು ಅದೇ ರೂಪದಲ್ಲಿ ಗರ್ಭ ತಳೆದು ಗಂಡು- ಹೆಣ್ಣು ಎರಡು ಮಕ್ಕಳು ಹುಟ್ಟಿದರು. ಮಕ್ಕಳು ಜನಿಸಿದ ಕಾಲಕ್ಕೆ ಆ ಕನ್ಯೆಗೆ ಶಾಪ ವಿಮೋಚನೆಯಾಯಿತು. ತನ್ನ ನಿಜ ರೂಪ ಪ್ರಾಪ್ತವಾದ ಅದ್ರಿಕೆ ಆ ಮಕ್ಕಳಲ್ಲಿ ಹೆಣ್ಣು ಮಗುವನ್ನು ದಾಶರಾಜನ ಕುಟೀರದ ಬಳಿಯೂ, ಗಂಡು ಮಗುವನ್ನು ಕೆಳಗೆ ಬಹುದೂರದ ಮತ್ಸ್ಯೇಶ ಎಂಬ ಅರಸನ ರಾಜಧಾನಿಯ ಬಳಿಯೂ ಬಿಟ್ಟು ತನ್ನ ಲೋಕಕ್ಕೆ ಹೊರಟು ಹೋದಳು. ದಾಶರಾಜನೂ, ಮತ್ಸ್ಯೇಶನೂ ತಮಗೆ ಅನಿರೀಕ್ಷಿತರವಾಗಿ ಸಿಕ್ಕ ಅನಾಥ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಿದ್ದರು.

ದಾಶರಾಜನು ತನ್ನ ಸಾಕುಮಗಳಿಗೆ ವಿದ್ಯೆ, ಕುಲಕಸುಬು ಕಲಿಸುತ್ತಾ ಯಮುನೆಯಲ್ಲಿ ಸಿಕ್ಕ ಮಗಳಾದ ಕಾರಣ ಕಾಲಿ ಎಂದು ಹೆಸರಿಟ್ಟು ಸಲಹುತ್ತಿದ್ದನು. ಸದ್ಗುಣ ಶೀಲೆಯಾದ್ದರಿಂದ ಸತ್ಯವತಿ ಶರೀರದಿಂದ ಮೀನಿನ ವಾಸನೆ ಬರುತ್ತಿದ್ದರಿಂದ ಮತ್ಸ್ಯಗಂಧಿ ಹೀಗೆ ಅನ್ವರ್ಥನಾಮಗಳೂ ಇವಳಿಗೆ ಸೇರಿಕೊಂಡಿದ್ದವು.

ತಂದೆಯ ವಂಶದ ಕುಲಕಸುಬು ಮೀನು ಹಿಡಿಯುವುದರಲ್ಲಿ, ದೋಣಿ ನಡೆಸುವುದರಲ್ಲಿ ಕೌಶಲಪೂರ್ಣವಾದ ಪರಿಣತಿಯನ್ನು ಪಡೆಯುತ್ತಾ ದಿನಗಳೆದಂತೆ ಸೌಂದರ್ಯದ ಗಣಿಯಾಗಿ ಕಾಲಿ (ಸತ್ಯವತಿ, ಮತ್ಸ್ಯಗಂಧಿ) ಬೆಳೆಯುತ್ತಿದ್ದಳು.

ಹೀಗಿರಲೊಂದು ದಿನ ಸ್ಮೃತಿಕಾರರೂ ಗೀತಾಚಾರ್ಯರೂ ಆಗಿರುವ ಪರಮ ಋಷಿ ಪರಾಶರರು ಲೋಕ ಸಂಚಾರಾರ್ಥವಾಗಿ ಹೊರಟು ಯಮುನಾ ತೀರಕ್ಕೆ ಬಂದರು. ನದಿಯನ್ನು ದಾಟಿ ಅವರಿಗೆ ಮುಂದೆ ಸಾಗಬೇಕಾಗಿತ್ತು. ಮಹಾತಪಸ್ವಿಗಳೊಬ್ಬರು ನದಿ ದಾಟುವುದಕ್ಕಾಗಿ ಬಂದಿರುವುದನ್ನು ಕಂಡು, ಊಟಕ್ಕೆ ಕುಳಿತಿದ್ದ ದಾಶರಾಜನು ಋಷಿಗಳ ಸಮಯ ವ್ಯರ್ಥವಾಗಬಾರದೆಂದು ತನ್ನ ಮಗಳು ಕಾಲಿಯನ್ನು ಕರೆದು ಆ ಕೆಲಸ ವಹಿಸಿ ಕಳುಹಿದ. ಕಾರಣ ಆಕೆಯೂ ದೋಣಿ ನಡೆಸುವುದರಲ್ಲಿ ಪ್ರವೀಣೆಯಾಗಿದ್ದಳು. ಋಷಿಗಳಿಗೆ ವಂದಿಸಿ ಭಕ್ತಿ, ಆದರ, ಸತ್ಕಾರ ಭಾವದಿಂದ ನಾವೆಯೇರಿಸಿ ತಾನೂ ಕುಳಿತು ನಿಧಾನವಾಗಿ ದೋಣಿ ನಡೆಸಲಾರಂಭಿಸಿದಳು.

ಪೂಜ್ಯ ಪರಾಶರರು ನದಿಯನ್ನೂ, ಅದರ ಗಮ್ಯವನ್ನೂ ಗಮನಿಸುತ್ತಾ ನೋಡಿದರೆ ತುಂಬು ಜವ್ವನೆ ಯಮುನೆ (ನದಿ) ತಳುಕು ಬಳುಕಿನ ನಿನಾದದೊಂದಿಗೆ ಸಾಗರನ ಸೇರಲು ಸಾಗುತ್ತಿದ್ದಾಳೆ. ನದಿಯ ಜುಳು ಜುಳು ಮಂಜುಳ ನಿನಾದಕ್ಕೆ ಹುಟ್ಟು ಎಳೆದು ದೋಣಿ ನಡೆಸುವ ಕಾಲಿಯ ಕೈ ಬಳೆಯ ಕಂಕಣರವವೂ ಆ ನಿನಾದದ ಜೊತೆ ಮಿಳಿತಗೊಳ್ಳುತ್ತಿದೆ. ನೆತ್ತಿಯೇರಿದ್ದ ಸೂರ್ಯನ ಬಿಸಿಯೇರಿದ ಶಾಖ ನದಿಯ ನೀರಿನ ಕಿರುದೆರೆಗಳ ಮೇಲೇರಿ ತೇಲಿ ತಂಪುಗೊಂಡು ತಂಗಾಳಿಯಾಗಿ ಬೀಸುತ್ತಿತ್ತು. ಈ ಸುಮಧುರ ಮಿಲನಗಳ ನಡುವೆ ಏನೋ ಒಂದು ದುರ್ಗಂಧ ಅತಿ ಸನಿಹದಿಂದ ಸುಳಿಯುತ್ತಿರುವುದನ್ನು ಅಘ್ರಾಣಿಸಿದರು. ದೋಣಿ ನಡೆಸುವ ಕಾಲಿಯಲ್ಲಿ ಕೇಳಿದಾಗ, ಆಕೆ ಲಜ್ಜೆಗೊಂಡು, ಬೇಸರ ಸಮ್ಮಿಳಿತ ಭಾವ ತಳೆದು “ಜನ್ಮದಿಂದಲೇ ನಾರುವ ಮೈಯನ್ನು ಹೊತ್ತು ಬಾಳುವ ದೌರ್ಭಾಗ್ಯವಂತೆಯಾಗಿದ್ದೇನೆ. ಈ ಸಮಸ್ಯೆಗೆ ಪರಿಹಾರವೇ ಕಾಣದಾಗಿ ಹೋಗಿ ಸಂತ್ರಸ್ತಳಾಗಿರುವವಳು ನಾನೇ ಎಂದಳು”. ಅಂಬಿಗೆಯ ಮಾತು ಕೇಳಿ ಕನಿಕರದೋರಿದ ಋಷಿವರೇಣ್ಯ ದಯಾಪರರಾಗಿ ತಪೋ ಮಹಿಮೆಯಿಂದ ಅವಳ ಮೈಯೊಗರ ಮಾಲಿನ್ಯವನ್ನು ನಿವಾರಿಸಿ ಅತಿ ಸುಗಂಧ ಪರಿಮಳಿಸುವಂತೆ ಅನುಗ್ರಹಿಸಿದರು. ಅತೀ ಸಂತೋಷಗೊಂಡ ಆಕೆ ನೀರವ ಮುಗುಳ್ನಗೆಯಿಂದಲೇ ಕೊರಳು ಬಗ್ಗಿಸಿ ನಮಸ್ಕರಿಸಿ ದೋಣಿಯ ಹುಟ್ಟನ್ನೆಳೆಯ ತೊಡಗಿದಳು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page