22.7 C
Udupi
Friday, November 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 704

ಭರತೇಶ ಶೆಟ್ಟಿ,ಎಕ್ಕಾರು

ಭೋರ್ಗರೆದು ಧುಮ್ಮಿಕ್ಕುವ ಜಲಪಾತದಂತೆ ಅಗ್ನಿಯ ಜ್ವಾಲಾಪಾತವು ಶಿಖರದಿಂದ ಕೆಳಗಿಳಿದು ಧಾವಿಸಿ ಬರತೊಡಗಿತಂತೆ. ಮಹಾಭಾಗ್ಯಶಾಲಿ, ಶತಪುತ್ರರ ವರ ಪಡೆದಿದ್ದ ಮಹಾಮಾತೆ ಗಾಂಧಾರಿ, ಶ್ರೀಕೃಷ್ಣ ಪರಮಾತ್ಮನ ಅತ್ತೆ – ಪಂಚಪಾಂಡವರ ಮಾತೆ ಕುಂತಿದೇವಿ, ರಾಜರ್ಷಿಯಾಗಿ ಮಹಾತ್ಮನಾಗಿ ದೋಷ ರಹಿತನಾಗಿದ್ದ ಧೃತರಾಷ್ಟ್ರ ಮೂವರೂ ಕಾಡುಗಿಚ್ಚಿನೊಳಗೆ ಸೇರಿ ಹೋದರು. ಈ ಸಮಯ ರಾಜಾಜ್ಞೆ ಪಾಲಿಸಲೇ ಬೇಕಾಗಿದ್ದ ಸಂಜಯ ಧೃತರಾಷ್ಟ್ರನ ಕೊನೆಯ ಆದೇಶವನ್ನು ಮನ್ನಿಸಿ ಶರವೇಗದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡು ಬಿಟ್ಟನಂತೆ.

ನಾನು ಲೋಕ ಸಂಚಾರ ಮಾಡುತ್ತಾ ಗಂಗಾತೀರದಲ್ಲಿ ವಿಹರಿಸುತ್ತಿರುವಾಗ ತಪಸ್ವಿಗಳು ಸಮಾಹಿತರಾಗಿದ್ದ ತಪೋವನದತ್ತ ಬಂದಿದ್ದೆನು. ಆಗ ಅಲ್ಲಿ ಸಂಜಯನನ್ನು ನೋಡಿದೆನು. ಬುದ್ಧಿವಂತನೂ, ತೇಜಸ್ವಿಯೂ ಆದ ಸಂಜಯನು ಈ ಎಲ್ಲಾ ವಿಷಯಗಳನ್ನು ಸುತ್ತ ನೆರೆದಿದ್ದ ಋಷಿ ಮುನಿಗಳ ಎದುರು ನನ್ನಲ್ಲಿ ಹೇಳಿ, ಕಡು ದುಃಖಿತನಾಗಿದ್ದ ಆತ ತಪೋಮಗ್ನನಾಗಲು ಹಿಮವತ್ಪರ್ವತದತ್ತ ಹೊರಟು ಹೋದನು. ಹೇ ಯುಧಿಷ್ಠಿರಾ! ಆತನಿಂದ ಈ ಕಥನವನ್ನು ತಿಳಿಯಲ್ಪಟ್ಟ ನಾನು ಅಲ್ಲಿಂದ ಹೊರಟು ಸಂಚರಿಸುತ್ತಿರುವಾಗ ಸಂಜಯ ಸೂಚಿಸಿದ ಅರಣ್ಯಮಾರ್ಗದಲ್ಲಿ ಸಾಗುತ್ತಿದ್ದೆ. ಆ ಸಮಯ ಆಕಸ್ಮಿಕವಾಗಿ ಮೂರು ಹೆಣಗಳನ್ನು ನೋಡಿದೆ. ಸೂಕ್ಷ್ಮವಾಗಿ ಅವಲೋಕಿಸಿದಾಗ ಓರ್ವ ರಾಜ, ಈರ್ವರು ದೇವಿಯರ ಶವಗಳೆಂದು ಗುರುತು ಹಿಡಿದೆ. ಈ ವಿಚಾರ ತಪೋವನಕ್ಕೂ ಹಬ್ಬಿದಾಗ ಋಷಿ ಮಹರ್ಷಿಗಳ ಸಾಗರ ಆ ಸ್ಥಳಕ್ಕೆ ಹರಿದು ಬಂತು. ಎಲ್ಲರೂ ಈ ಮೂವರು ತಪಸ್ವಿಗಳ ಪಾರ್ಥಿವ ಶರೀರದ ದರ್ಶನ ಮಾಡಿ ಸದ್ಗತಿಗಾಗಿ ಪ್ರಾರ್ಥಿಸಿದರು. ಸತ್ಯದರ್ಶನದ ಶಕ್ತಿ ಸಂಪನ್ನರಾದ ಋಷಿಮುನಿಗಳು ತಮ್ಮ ಜೊತೆ ತಪೋವನದಲ್ಲಿದ್ದು ತಪಸ್ಚರ್ಯೆ ನಿರತರಾಗಿದ್ದ ಧೃತರಾಷ್ಟ್ರ, ಗಾಂಧಾರಿ, ಕುಂತಿಯರಿಗೆ ಸದ್ಗತಿ ಪ್ರಾಪ್ತವಾಗಿದೆ ಎಂಬುವುದನ್ನು ದಿವ್ಯದೃಷ್ಟಿಯಿಂದ ಮನಗಂಡು ಸಂತೋಷಿಗಳಾದರು. ಹೇ! ಧರ್ಮರಾಯ ಈ ವಿಚಾರ ನಿನಗೇಕೆ ತಿಳಿಸುತ್ತಿದ್ದೇನೆ ಎಂದರೆ ಘಟಿಸಿದ ಸಂಗತಿಯೂ, ತದನಂತರ ಅವರಿಗೆ ಪ್ರಾಪ್ತವಾದ ಉನ್ನತ ಗತಿಯೂ ನಿನಗೆ ವೇದ್ಯವಾಗಲಿ. ತಪಸ್ವಿಗಳಾಗಿ ವಾರ್ಧಕ (ವಯೋವೃದ್ಧ ಪ್ರಾಯ)ದಲ್ಲಿ ತಪೋವನ ಸೇರಿ ಅಗ್ನಿಗಾಹುತಿಯಾಗಿ ಮರಣ ಹೊಂದಿದರೂ ಪರಿಣಾಮದಲ್ಲಿ ಅವರು ಸುಕ್ಷೇಮವಾದ ಸ್ಥಾನವನ್ನು ಹೊಂದಿದ್ದಾರೆ ಎಂಬ ಸತ್ಯ ತಿಳಿದು ನೀನು ದುಃಖ ಹೊಂದಬಾರದು ಎಂಬ ಕಾರಣದಿಂದ ಸಮಗ್ರ ಕಥನವನ್ನು ನಿನಗೆ ವಿವರಿಸಿದ್ದೇನೆ” ಎಂದು ನಾರದರು ಹೇಳಿದರು.

ಇಷ್ಟು ಕಥೆಯನ್ನು ನಾರದರು ಹೇಳಿ ಅಲ್ಲಿರುವವರನ್ನು ಸಂತೈಸಿದರಾದರೂ ಹಸ್ತಿನೆಯ ಅರಮನೆಯಲ್ಲಿ ಆರ್ತನಾದ ಮುಗಿಲು ಮುಟ್ಟಿತು. ಮಾತೆ ಕುಂತಿಗೆ ಪಂಚ ಪಾಂಡವರು ಪುತ್ರರಾಗಿ ಬದುಕಿದ್ದರೂ ಅನಾಥ ಸಾವು ಪ್ರಾಪ್ತವಾಯಿತು. ಧೃತರಾಷ್ಟ್ರ ಗಾಂಧಾರಿಯರಿಗೆ ನೂರು ಪುತ್ರರಿದ್ದರೂ ಹತಭಾಗ್ಯರಾಗಿ ಕೊನೆಗೆ ಯಾರೂ ಬಳಿ ಇಲ್ಲದೆ ಸಾಯುವಂತಾಯಿತಲ್ಲ ಎಂಬ ಕೊರಗು ಕಡು ದುಃಖವನ್ನು ನೀಡಿತು.
ನಾರದರು ಎಷ್ಟು ಸಮಾಧಾನ ಹೇಳಿದರೂ ಪಾಂಡವರ ದುಃಖ ಉಪಶಮನವಾಗಲಿಲ್ಲ. ಧರ್ಮರಾಯ ಮತ್ತವನ ಸೋದರರು ಅಳುತ್ತಾ ಅವರವರ ಭಾವ ಪ್ರಕಟಿಸತೊಡಗಿದರು. ಹಿರಿಯರ ಸೇವೆ ಮಾಡುವುದು ತಮ್ಮ ಪಾಲಿಗೆ ಪರಮ ಧರ್ಮವಾಗಿತ್ತು. ಮೆತ್ತನೆಯ ಹಾಸಿಗೆಯಲ್ಲಿ ಪವಡಿಸಿ, ಪರಿಚಾರಕರ ಸೇವೆ ಸ್ವೀಕರಿಸುತ್ತಾ, ಆದೇಶ ಮಾತ್ರದಿಂದ ಬಯಸಿದುದನ್ನು ಪಡೆದುಕೊಳ್ಳುವ ಭಾಗ್ಯವಿದ್ದರೂ ಎಲ್ಲವನ್ನೂ ಪರಿತ್ಯಾಗ ಮಾಡಿ ಕಾಡು ಸೇರಿ ಅನ್ನ ಆಹಾರಗಳಿಲ್ಲದೆ, ನಿರ್ಗತಿಕನಂತೆ ಕೊನೆ ಕಂಡರಲ್ಲ? ಅಂತ್ಯಸಂಸ್ಕಾರಕ್ಕೂ ಪುತ್ರ ಪೌತ್ರರಿಗೆ ಅವಕಾಶವಿಲ್ಲದೆ ಹೋಯಿತಲ್ಲಾ ಎಂದು ಮರುಗಿದರು. ನಮ್ಮ ಈ ಸಾಮ್ರಾಜ್ಯ, ಅಧಿಕಾರ, ವೈಭೋಗಗಳಿಗೆ ಧಿಕ್ಕಾರವಿರಲಿ. ಹೆತ್ತ ತಾಯಿ ಕುಂತಿಗೆ ಸಾಮ್ರಾಟರಾದ ಪುತ್ರರು, ಮಹಾವಿಕ್ರಮಿಗಳು, ಧರ್ಮಕ್ಕಾಗಿ ಜೀವನ ಮುಡಿಪಾಗಿಟ್ಟ ಧರ್ಮಾತ್ಮರಾದ ಮಕ್ಕಳಿದ್ದರೂ ಕೊನೆಯ ಗಳಿಗೆಯಲ್ಲಿ ಏನೂ ಇಲ್ಲದೆ, ಅಸಹಾಯಕರಾಗಿ, ಅನ್ನ ಆಹಾರಗಳೂ ಇಲ್ಲದೆ, ಕಾಡ ಮೃಗಗಳಿಗೆ ಸಮಾನರಾಗಿ ಸಾಯುವ ದುರ್ದೆಸೆ ಒದಗಿತಲ್ಲಾ… ಸತ್ಯ ತಿಳಿದ ಆ ಮಹಾಮಾತೆಯ ಮಕ್ಕಳಾದ ನಮ್ಮ ಜೀವಕ್ಕೂ ಧಿಕ್ಕಾರವೇ ಭೂಷಣ. ಯಾಕೆಂದರೆ ಲೋಕ ಲೋಕಗಳಲ್ಲೂ ಅಜೇಯರಾದ ಭೀಮಾರ್ಜುನರ ತಾಯಿ ಆಕೆ, ಶ್ರೀಕೃಷ್ಣ ಪರಮಾತ್ಮನ ಅತ್ತೆ ಆಕೆ. ತನ್ನ ಬದುಕಿನಲ್ಲಿ ಅಧರ್ಮ ಎಸಗದಂತೆ ಹೆಜ್ಜೆ ಹೆಜ್ಜೆಗೂ ಧರ್ಮ ಧರ್ಮ ಎಂದು ಜಪಿಸುತ್ತಿದ್ದ ಧರ್ಮಮೂರ್ತಿ ಧರ್ಮರಾಯನ ತಾಯಿ ಆಕೆ! ಪಾಂಡು ಚಕ್ರವರ್ತಿಯ ಮಹಾರಾಣಿ. ಯಮಧರ್ಮ, ಇಂದ್ರ, ವಾಯು ದೇವರುಗಳ ಅನುಗ್ರಹಕ್ಕೆ ಪಾತ್ರರಾದವಳು. ಇವರ್ಯಾರೂ ಅಂತಿಮ ಕ್ಷಣದಲ್ಲಿ ಸಹಾಯಕ್ಕೆ ಒದಗದೇ ಹೋದರೇ? ಛೇ ಆ ಅಗ್ನಿಯೂ ಕೃತಘ್ನನಾದನೆ? ರೋಗಬಾಧಿತನಾದ ಅಗ್ನಿಯ ಆರೋಗ್ಯಪ್ರಾಪ್ತಿಗಾಗಿ ಖಾಂಡವ ವನ ದಹನ ಕಾಲದಲ್ಲಿ ಸಹಾಯಿಯಾಗಿದ್ದ ಅರ್ಜುನನ ನೆನಪೂ ಆ ಅಗ್ನಿಗೆ ಆಗದೆ ಹೋಯಿತೇ? ಅರ್ಜುನನ ಮಾತೆಯ ದೇಹವನ್ನು ಸುಡುವಾಗ ಕನಿಷ್ಠ ಕೃತಜ್ಞತಾ ಭಾವವೂ ಆತನದ್ದಾಗಲಿಲ್ಲವೇ? ಅಗ್ನಿಯು ಸುಡುವಾಗ ನಮ್ಮಮ್ಮ ಹಾಹಾಕಾರದಿಂದ ಎಷ್ಟು ಕೂಗಿರಬಹುದು? ಸರ್ವ ಸಮರ್ಥ ಮಕ್ಕಳು ನಾವಿದ್ದೂ ಏನೂ ಮಾಡಲಾಗದೇ ಹೋಯಿತಲ್ಲ?! ಎಂದೆಲ್ಲಾ ಪರಿತಪಿಸುತ್ತಾ ರೋದಿಸತೊಡಗಿದರು.

ಕುಂತಿಯ ಬದುಕಿನಲ್ಲಿ ಹೀಗಾಗುವುದಕ್ಕೆ ಇಂತಹ ಸಾವು ಪ್ರಾಪ್ತ ಅಗುವುದಕ್ಕೆ ಬಲವಾದ ಕರ್ಮಫಲ ಕಾರಣ. ಅಂದರೆ ಆಕೆಯಿಂದ ಆಚರಿಸಲ್ಪಟ್ಟ ಕರ್ಮ ಕಾಡ್ಗಿಚ್ಚಾಗಿ ಹಿಂಬಾಲಿಸಿ ಬಂದಿದೆ. ಹೀಗಾಗುವುದಕ್ಕೆ ಹಿನ್ನೆಲೆಯಾಗಿ ಕಥೆ ಇದೆ!

spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page