31.8 C
Udupi
Tuesday, November 17, 2026
spot_img
spot_img
HomeBlog'ಕುಟುಂಬದ ಬಗ್ಗೆ ಹರಿದಾಡಿದ ಸುಳ್ಳುಗಳಿಗೆ ಉತ್ತರಿಸಲು ಆತ್ಮಚರಿತ್ರೆ ಬರೆದೆ': ಸೋನಿಯಾ ಗಾಂಧಿ

‘ಕುಟುಂಬದ ಬಗ್ಗೆ ಹರಿದಾಡಿದ ಸುಳ್ಳುಗಳಿಗೆ ಉತ್ತರಿಸಲು ಆತ್ಮಚರಿತ್ರೆ ಬರೆದೆ’: ಸೋನಿಯಾ ಗಾಂಧಿ

ನವದೆಹಲಿ: ತಮ್ಮ ಕುಟುಂಬದ ಬಗ್ಗೆ ಹಲವು ಸುಳ್ಳು ಕಥೆಗಳನ್ನು ಬರೆಯಲಾಗಿದ್ದು, ಜನರಿಗೆ ನೈಜ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಆತ್ಮಚರಿತ್ರೆ ಬರೆದಿರುವುದಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ತಿಳಿಸಿದ್ದಾರೆ.

ತಮ್ಮ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಅತ್ತೆ ಇಂದಿರಾ ಗಾಂಧಿ ಹಾಗೂ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ಘಟನೆಗಳನ್ನು ಬರೆಯುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ರಾಜೀವ್ ಗಾಂಧಿ ಅವರೊಂದಿಗಿನ ಬಾಂಧವ್ಯವನ್ನು ಸ್ಮರಿಸಿದ ಅವರು, ತಮ್ಮ ಪ್ರೀತಿ ಅದ್ಭುತವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಪುಸ್ತಕಕ್ಕೆ ಓದುಗರಿಂದ ದೊರೆಯುತ್ತಿರುವ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ ಸೋನಿಯಾ, ಈ ಮಟ್ಟದ ಸ್ಪಂದನೆಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಸ್ನೇಹಿತರು ತಮ್ಮ ಜೀವನದ ಕಥೆ ಬರೆಯುವಂತೆ ಒತ್ತಾಯಿಸುತ್ತಿದ್ದರು. ಬಳಿಕ ರಾಹುಲ್ ಮತ್ತು ಪ್ರಿಯಾಂಕಾ ಅವರ ಒತ್ತಾಯದ ಮೇರೆಗೆ ಪುಸ್ತಕ ಬರೆಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ತಮ್ಮ ಕುಟುಂಬದ ಬಗ್ಗೆ ಹಲವು ಸುಳ್ಳು ವಿಚಾರಗಳು ಹರಿದಾಡಿದ್ದು, ಅವು ನೋವುಂಟುಮಾಡಿದ್ದವು. ಹೀಗಾಗಿ ಕುಟುಂಬದ ಕುರಿತ ವಾಸ್ತವಾಂಶಗಳು ಮತ್ತು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಈ ಪುಸ್ತಕವನ್ನು ಬರೆದಿರುವುದಾಗಿ ಹೇಳಿದ್ದಾರೆ.

ಪುಸ್ತಕದ ಶೀರ್ಷಿಕೆಯು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ತಾವು ಎದುರಿಸಿದ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ. ಮದುವೆಯ ಬಳಿಕ ಹೊಸ ಮನೆ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವುದು ಬಹುತೇಕ ಮಹಿಳೆಯರಿಗೆ ಎದುರಾಗುವ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜೀವ್ ಗಾಂಧಿ ರಾಜಕೀಯಕ್ಕೆ ಪ್ರವೇಶಿಸುವುದು ಆರಂಭದಲ್ಲಿ ತಮಗೆ ಇಷ್ಟವಿರಲಿಲ್ಲ. ರಾಜಕೀಯದಿಂದಾಗಿ ಒಟ್ಟಿಗೆ ಕಳೆಯುವ ಸಮಯ ಕಡಿಮೆಯಾಗಬಹುದು ಎಂಬ ಆತಂಕವಿತ್ತು. ಅವರ ನಿರಂತರ ಪ್ರಯಾಣದಿಂದ ಜೀವನದಲ್ಲಿ ಬದಲಾವಣೆಗಳಾದರೂ, ಪರಸ್ಪರ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು. ಒಟ್ಟಿಗೆ ಕಳೆಯುವ ಅಲ್ಪ ಸಮಯವೂ ತಮಗೆ ಅಮೂಲ್ಯವಾಗಿತ್ತು ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page