
ಕಾರ್ಕಳ: ತಾಲೂಕು ಕಚೇರಿಯ ಬಳಿ ಇರುವ ಮಕ್ಕಳ ಉದ್ಯಾನವನದ ಹತ್ತಿರ ಗಂಡು ಕಡವೆ ಒಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಬೆಳಗಿನ ಸಮಯಕ್ಕೆ ವಾಯುವಿಹಾರಕ್ಕೆ, ಬಂದವರು ಕಡವೆ ಸತ್ತು ಬಿದ್ದಿರುವುದನ್ನು ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಡವೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಕಡವೆಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿಯ ಬಳಿಕ ಕಾರಣ ತಿಳಿದು ಬರಲಿದೆ ಎಂದು ಕಾರ್ಕಳ ಇಲಾಖೆಯ ಆರ್ ಎಫ್ ಒ ಅರುಣ್ ತಿಳಿಸಿದ್ದಾರೆ ಎನ್ನಲಾಗಿದೆ.






























































































































