ವಿರೋಧ ಪಕ್ಷದ ನಾಯಕರೇ, ನಿಮ್ಮ ಸವಲತ್ತುಗಳನ್ನು ತ್ಯಜಿಸಿ…
ಬೆಳ್ಳಿಪಾಡಿ ನೇಮಿರಾಜ್ ರೈ

ಸರಕಾರದ ಬಳಿ ಹಣವಿಲ್ಲ ಎನ್ನುವ ವಿರೋಧ ಪಕ್ಷದ ನಾಯಕರೇ ಮೊದಲು ನಿಮ್ಮ ಸವಲತ್ತುಗಳನ್ನು ತ್ಯಜಿಸಿ,
ಸರಕಾರದ ಬಳಿ ಹಣವಿಲ್ಲ ರಾಜ್ಯದ ಖಜಾನೆ ಸಂಕಷ್ಟದಲ್ಲಿದೆ ಎಂದು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿರುವ ಕರ್ನಾಟಕ ವಿರೋಧ ಪಕ್ಷದ ನಾಯಕರಿಗೆ ಅದರಲ್ಲೂ ಕಾರ್ಕಳ ಶಾಸಕರಿಗೆ ನನ್ನ ಪ್ರಶ್ನೆ ಒಂದೇ.
ರಾಜ್ಯದ ಆರ್ಥಿಕ ಸಂಕಷ್ಟದ ಬಗ್ಗೆ ಇಷ್ಟೊಂದು ಕಾಳಜಿ ಇದ್ದರೆ ಮೊದಲು ನೀವು ಸೇರಿದಂತೆ ಶಾಸಕರು, ಸಂಸದರು ಪಡೆಯುತ್ತಿರುವ ವೈಭವದ ಸವಲತ್ತುಗಳು ಹಾಗೂ ಜೀವನ ಪರ್ಯಂತದ ಪಿಂಚಣಿ ಪಡೆಯುವುದನ್ನು ನಿಲ್ಲಿಸಲು ಏಕೆ ಮುಂದಾಗಬಾರದು?
ಜನರಿಗೆ ಆರ್ಥಿಕ ಸಂಕಷ್ಟದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬದಲು ನಿಮ್ಮದೇ ಸವಲತ್ತುಗಳ ವಿಚಾರದಲ್ಲಿ ತ್ಯಾಗಕ್ಕೆ ಸಿದ್ಧರಾಗಿ ಅದಕ್ಕಾಗಿ ಅಗತ್ಯವಿರುವ ಮಸೂದೆಯನ್ನು ವಿಧಾನಸಭೆಯಲ್ಲಿ ತರಲು ಮುಂದಾಗಿ,ಶ್ರೀಲಂಕದಲ್ಲಿ ರಾಜಕೀಯ ಪ್ರತಿನಿಧಿಗಳ ಸವಲತ್ತುಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಕೈಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಬೇಕಾದ ಪಾಠವನ್ನು ಕಲಿತು, ಕರ್ನಾಟಕದಲ್ಲಿ ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಹೊಸ ಚರ್ಚೆಗೆ ಚಾಲನೆ ನೀಡಿ .ಇದು ವಿರೋಧ ಪಕ್ಷಕ್ಕೆ ಒಂದು ಸುವರ್ಣ ಅವಕಾಶ ಎಂದು ಸಾಮಾಜಿಕ ಚಿಂತಕ ಬೆಳ್ಳಿಪಾಡಿ ನೇಮಿರಾಜ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















