
ಶ್ರೀ ಕಾಶಿ ಶೇಷ ಶಾಸ್ತ್ರಿ, ಚಾರಿಟೇಬಲ್ ಟ್ರಸ್ಟ್ (ರಿಜಿಸ್ಟರ್ಡ್) ಬೆಂಗಳೂರು ಇವರು ಕೊಡಮಾಡಿದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು, ಸಾಂಸ್ಕೃತಿಕ, ಕಲೆ, ನೃತ್ಯ, ಮೋನೋ ಆಕ್ಟ್ ಮೊದಲಾದ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಸಾಧನೆ ಮಾಡಿದ ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿರುವ ಶ್ರೀಮತಿ ವಂದನಾ ರೈ ಅವರು ಗಳಿಸಿರುತ್ತಾರೆ.
ದಿನಾಂಕ 13 ಸೆಪ್ಟೆಂಬರ್ 2026ರಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇವರನ್ನು ಶಾಲಾ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದರು.






























































































































