
ಕಾರ್ಕಳದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಆಗೋಸ್ತು ತಿಂಗಳ ಕಾರ್ಯಕ್ರಮವಾಗಿ ‘ಮುಂಗಾರು ಕವಿಗೋಷ್ಠಿ’ ಸ್ಥಳೀಯ ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ನಡೆಯಿತು.
ಸದಸ್ಯೆಯರಾದ ಅನುಪಮಾ ಚಿಪ್ಳೂಂಕರ್,ಮಾಲತಿ ವಿ ರಾಜ್,ಮಿತ್ರಪ್ರಭಾ ಹೆಗ್ಡೆ,ರಾಧಿಕಾಶೆಣೈ,ಶುಭಲಕ್ಷ್ಮಿ ನಾಯಕ್, ವಸುಧಾ ಶೆಣೈ,ಡಾ.ಸುಮತಿ,ಗೀತಾ ಮರಾಠೆ,ಸುಲೋಚನಾ ಬಿ.ವಿ ಶೈಲಜಾ ಹೆಗ್ಡೆ,ರೂಪಾ ಚಿಪ್ಳುಳೂಂಕರ್ ಮುಂತಾದವರು ಮುಂಗಾರಿನ ವೈಭವವನ್ನು ಬಣ್ಣಿಸುವ ಕವನಗಳನ್ನು ಓದಿದರು.ವಿಶೇಷ ಅತಿಥಿಯಾಗಿ ಭಾಗವಹಿಸಿದ ಶ್ರೀ ಗಂಗಾಧರ ಫಣಿಯೂರು ಅವರೂ ತಮ್ಮ ಕವನವೊಂದನ್ನು ವಾಚಿಸುವ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿದರು. ಜಾಗೃತಿಯ ಪ್ರಸಕ್ತ ಸಾಲಿನ ಅಧ್ಯಕ್ಷೆ ಶ್ಯಾಮಲಾ ಗೋಪೀನಾಥ್ ಕವಿ ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ನೋಡುವ ಕಣ್ಣು,ವಿಹರಿಸುವ ಕಲ್ಪನಾ ಶಕ್ತಿ,ಶಬ್ದ ಲಾಲಿತ್ಯ ಹಾಗೂ ಒಳನೋಟಗಳು ಒಳ್ಳೆಯ ಕವನವನ್ನು ಹುಟ್ಟು ಹಾಕುತ್ತವೆ ಅನ್ನುತ್ತಾ ಸ್ವರಚಿತ ಕವನವೊಂದನ್ನು ವಾಚಿಸಿದರು.ಸುಲೋಚನಾ ಬಿ.ವಿ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಗೀತಾ ಮರಾಠೆ ಪ್ರಾರ್ಥಿಸಿ,ಕಾರ್ಯದರ್ಶಿ ರೂಪಾ ಚಿಪ್ಳೂಂಕರ್ ವಂದಿಸಿದರು.



























































