ಸರಕಾರಿ ಪ್ರೌಢಶಾಲೆ ನಕ್ರೆ, ವಿದ್ಯಾರ್ಥಿಗಳಾದ ಸಂಪ್ರೀತ್ ನಾಯ್ಕ್ ಹಾಗೂ ಪ್ರಣೇಶ್ ಪ್ರಥಮ ಸ್ಥಾನ, ವಿಭಾಗ ಮಟ್ಟಕ್ಕೆ ಆಯ್ಕೆ

ದಿನಾಂಕ:31/10/2026 ರಂದು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಕರ್ನಾಟಕ ಸರಕಾರ ಹಾಗೂ ವಿಜಯ ಮಕ್ಕಳ ಕೂಟ ಆತ್ರಾಡಿ ಬೈಂದೂರು ವಲಯ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ 17 ರೊಳಗಿನ ವಯೋಮಿತಿಯ ಆರ್ಟಿಸ್ಟಿಕ್ ಪೆಯರ್ ( ARTISTIC PAIR) ಯೋಗಾಸನ ಸ್ಪರ್ಧೆಯಲ್ಲಿ
ಸರಕಾರಿ ಪ್ರೌಢಶಾಲೆ ನಕ್ರೆ ಇಲ್ಲಿನ 10 ನೇ ತರಗತಿಯ ವಿದ್ಯಾರ್ಥಿಗಳಾದ ಸಂಪ್ರೀತ್ ನಾಯ್ಕ ಹಾಗೂ ಪ್ರಣೇಶ್ ಪ್ರಥಮ ಸ್ಥಾನ ಪಡೆದು ಮಂಡ್ಯದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಸ್ಪರ್ಧೆ ಗೆ ಆಯ್ಕೆಯಾಗಿರುತ್ತಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿಯವರಾದ ಶ್ರೀಮತಿ ರೇಣುಕಾ ಇವರು ತರಬೇತಿ ನೀಡಿರುತ್ತಾರೆ.
ಇವರಿಗೆ ಶಾಲಾ ಮುಖ್ಯ ಶಿಕ್ಷಕರು & ಶಿಕ್ಷಕ ವ್ರಂದ , SDMC ಅಧ್ಯಕ್ಷ ರು ಹಾಗೂ ಸರ್ವ ಸದಸ್ಯರು ಶುಭಹಾರೈಸಿದರು.

























