29.3 C
Udupi
Tuesday, October 6, 2026
spot_img
spot_img
HomeBlogಹಿರಿಯ ಕಂಬಳ ಓಟಗಾರ ಅಶೋಕ್ ಕುಮಾರ್ ಜೈನ್‌ಗೆ ‘ಕಂಬಳ ಅಕಾಡೆಮಿ ಪ್ರಶಸ್ತಿ’

ಹಿರಿಯ ಕಂಬಳ ಓಟಗಾರ ಅಶೋಕ್ ಕುಮಾರ್ ಜೈನ್‌ಗೆ ‘ಕಂಬಳ ಅಕಾಡೆಮಿ ಪ್ರಶಸ್ತಿ’

ಕಂಬಳ ಕ್ಷೇತ್ರದ ಹಿರಿಯ ಓಟಗಾರ ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ಅವರು 2026ನೇ ಸಾಲಿನ ‘ಕಂಬಳ ಅಕಾಡೆಮಿ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅ.8ರಂದು ಬೆಳಿಗ್ಗೆ 11.30ಕ್ಕೆ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಸಮಾರಂಭ ನಡೆಯಲಿದೆ.

ಕಂಬಳ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅಶೋಕ್ ಕುಮಾರ್ ಜೈನ್ ಅವರು ಈದು ಗ್ರಾಮದಲ್ಲಿ ದಶಕಗಳ ಕಾಲ ಕಂಬಳ ಕ್ರೀಡೆಯಲ್ಲಿ ತೊಡಗಿಸಿಕೊಂಡು, ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿದ್ದಾರೆ.

ಅಲ್ಲದೆ, ಈದು ಮುಜಿಲ್ನಯ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಧಾರ್ಮಿಕ ಕಾರ್ಯಗಳ ನಿರಂತರ ನಿರ್ವಹಣೆಯಲ್ಲಿಯೂ ಅವರು ಪ್ರಮುಖ ಪಾತ್ರವಹಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page