
ಸ್ವಚ್ಛ ಕಾರ್ಕಳ ಬ್ರಿಗೇಡ್ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಇವರ ಸಹಯೋಗದೊಂದಿಗೆ ಕಳೆದ ಜುಲೈ ತಿಂಗಳಲ್ಲಿ ನೆಟ್ಟು ಬೆಳೆಸಲಾದ ನೇಪಿಯರ್ ಹುಲ್ಲು, ಸದಸ್ಯರ ನಿರಂತರ ಪಾಲನೆ ಮತ್ತು ಪೋಷಣೆಯಿಂದ ಸಮೃದ್ಧವಾಗಿ ಬೆಳೆದು ನಿಂತಿತ್ತು.
ಈ ಹಿನ್ನೆಲೆಯಲ್ಲಿ ಇಂದು ಪರಮಪೂಜ್ಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ದಿವ್ಯ ಹಸ್ತದಿಂದ ನೇಪಿಯರ್ ಹುಲ್ಲಿನ ಕಟಾವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ನ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಂಡು ನೇಪಿಯರ್ ಹುಲ್ಲಿನ ಕಟಾವು ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು. ಕಟಾವು ಮಾಡಿದ ಸುಮಾರು ಒಂದು ಪಿಕಪ್ ಲೋಡ್ನಷ್ಟು ಹಸಿರು ಮೇವನ್ನು ನೀಲಾವರದ ಗೋವರ್ಧನಗಿರಿ ಟ್ರಸ್ಟ್ನ ಗೋಶಾಲೆಗೆ ಗೋವುಗಳ ಆಹಾರಕ್ಕಾಗಿ ಸಮರ್ಪಿಸಲಾಯಿತು.






















































































