
ಕಾಂತಾವರ: ಗೆಳೆಯರ ಬಳಗ ಕಾಂತಾವರ (ರಿ.) ಇದರ 11ನೇ ವರ್ಷದ ಸಂಭ್ರಮದ ಅಂಗವಾಗಿ ನವೆಂಬರ್ 22ರಂದು ಭಾನುವಾರ ಸುಗ್ಗಿದ ಗೊಬ್ಬು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
ಕಾಂತಾವರದ ಅಂಬೋಡಿಮಾರು ಕೊಡಮಣಿತ್ತಾಯ ದೈವಸ್ಥಾನದ ಬಳಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಮಹಿಳೆಯರ ತ್ರೋ ಬಾಲ್, ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ, ಪುರುಷರ ಮತ್ತು ಅಂಡರ್ 19 ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು ಎಲ್ಲರಿಗೂ ಮುಕ್ತ ಅವಕಾಶವಿದೆ ಬಹುಮಾನಗಳ ವಿವರ ಈ ಕೆಳಗಿಂನಂತಿವೆ
:ಮಹಿಳೆಯರ ತ್ರೋ ಬಾಲ್:* ಪ್ರಥಮ: ₹3,003 ನಗದು ಹಾಗೂ ಟ್ರೋಫಿ.
ದ್ವಿತೀಯ: ₹2,002 ನಗದು ಹಾಗೂ ಟ್ರೋಫಿ.
ಪುರುಷರ ವಾಲಿಬಾಲ್:* ಪ್ರಥಮ: ₹5,005 ನಗದು ಹಾಗೂ ಟ್ರೋಫಿ.*
ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.
ಪುರುಷರ ಹಗ್ಗಜಗ್ಗಾಟ:* ಪ್ರಥಮ: ₹5,005 ನಗದು ಹಾಗೂ ಟ್ರೋಫಿ.*
ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.*
ತೃತೀಯ ಹಾಗೂ ಚತುರ್ಥ ಸ್ಥಾನಕ್ಕೆ ಟ್ರೋಫಿ.
ಮಹಿಳೆಯರ ಹಗ್ಗಜಗ್ಗಾಟ:* ಪ್ರಥಮ: ₹5,005 ನಗದು ಹಾಗೂ ಟ್ರೋಫಿ.*
ದ್ವಿತೀಯ: ₹3,003 ನಗದು ಹಾಗೂ ಟ್ರೋಫಿ.
ಅಂಡರ್ 19 ಹಗ್ಗಜಗ್ಗಾಟ:* ಪ್ರಥಮ: ₹2,002 ನಗದು ಹಾಗೂ ಟ್ರೋಫಿ.*
ದ್ವಿತೀಯ: ₹1,001 ನಗದು ಹಾಗೂ ಟ್ರೋಫಿ.
ಹಗ್ಗಜಗ್ಗಾಟ ಸ್ಪರ್ಧೆಗಳು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದ್ದು, ಭಾಗವಹಿಸುವ ತಂಡಗಳು ನವೆಂಬರ್ 21ರ ಸಂಜೆ 7 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಗೆಳೆಯರ ಬಳಗ ಕಾಂತಾವರ (ರಿ.) ಇದರ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 9867156980 / 9844469883.






















































































