
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸೆಪ್ಟೆಂಬರ್ 19ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಪುಟ್ಟ ಹೆಜ್ಜೆ ಗುರುತಿನ ಚಿತ್ರದೊಂದಿಗೆ ‘Welcome Baby Girl’ ಎಂದು ಬರೆದುಕೊಂಡಿದ್ದಾರೆ.
2024ರ ಸೆಪ್ಟೆಂಬರ್ 8ರಂದು ದಂಪತಿಗೆ ಮೊದಲ ಮಗು ದುವಾ ಜನಿಸಿತ್ತು. ದುವಾಳ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ದೀಪಿಕಾ ತಮ್ಮ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು.
ಮಗುವಿನ ಜನನಕ್ಕೂ ಮುನ್ನ ಶುಕ್ರವಾರ ದೀಪಿಕಾ ಹಾಗೂ ರಣವೀರ್ ಸಿಂಗ್ ಕುಟುಂಬ ಸಮೇತರಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.
ತಾರಾ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಅವರ ಪೋಸ್ಟ್ಗೆ 40 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 58 ಸಾವಿರಕ್ಕೂ ಅಧಿಕ ಕಾಮೆಂಟ್ಗಳು ಬಂದಿವೆ.
ಕೃತಿ ಸನೋನ್, ಸೋನಂ ಕಪೂರ್, ಅನಿಲ್ ಕಪೂರ್, ಶ್ರೇಯಾ ಘೋಷಾಲ್, ಮಸಬಾ ಗುಪ್ತಾ ಹಾಗೂ ಕೃತಿ ಕರಬಂದ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ದೀಪಿಕಾ-ರಣವೀರ್ ದಂಪತಿಗೆ ಶುಭ ಹಾರೈಸಿದ್ದಾರೆ.






























































































































