ಯೋಗಾಸನ ಸ್ಪರ್ಧೆಯಲ್ಲಿ, ವರ್ಧಮಾನ ವಿದ್ಯಾರ್ಥಿಗಳ ಸಾಧನೆ

ದಸರಾ ಕ್ರೀಡಾಕೂಟ–ಸಿಎಂ ಕಪ್ 2026: ಯೋಗಾಸನ ಸ್ಪರ್ಧೆಯಲ್ಲಿ ವರ್ಧಮಾನ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026ರ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ವರ್ಧಮಾನ ವಿದ್ಯಾ ಸಂಸ್ಥೆ, ಕಾರ್ಕಳದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಹಲವು ಪ್ರಶಸ್ತಿಗಳನ್ನು ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ,
ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ…
ಪ್ರಥಮ ಬಹುಮಾನ..
ಗಾನ್ವಿ. ಜಿ
ಅನ್ವಿ ಕೋಟ್ಯಾನ್
ಲಯಬದ್ಧ ಯೋಗಾಸನ ಜೋಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ….
ಗಾನ್ವಿ ಜಿ.
ಅನ್ವಿ ಕೋಟ್ಯಾನ್.
ಸಾಂಪ್ರದಾಯಿಕ ಯೋಗಾಸನ ವಿಭಾಗದಲ್ಲಿ
ತೃತೀಯ ಬಹುಮಾನ….
ಪ್ರತ್ಯುಷಾ ಕುಂದರ್
ಬಾಲಕರ ವಿಭಾಗದಲ್ಲಿ,
ಕಲಾತ್ಮಕ ಯೋಗಾಸನ ಜೋಡಿ ವಿಭಾಗದಲ್ಲಿ ಪ್ರಥಮ ಬಹುಮಾನ…
ವೇದಾಂತ್ ಎಸ್.
ಮಿರೋನ್.
ಲಯಬದ್ಧ ಯೋಗಾಸನ ಜೋಡಿ ವಿಭಾಗದಲ್ಲಿ
ಪ್ರಥಮ ಬಹುಮಾನ..
ಮೊಹಮ್ಮದ್ ರುವೈಫ್
ಶಿರೀಶ್ ಎಸ್. ಸನಿಲ್.
ವಿದ್ಯಾರ್ಥಿಗಳ ಸಾಧನೆ ಹಾಗೂ ತರಬೇತುದಾರರಾದ ಯೋಗ ಶಿಕ್ಷಕಿ ಮಮತಾ ಗಣೇಶ್ ರವರನ್ನು ವರ್ಧಮಾನ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಕೆ ಹೆಗ್ಡೆ, ಕುಮಾರಯ್ಯ ಹೆಗ್ಡೆ, ಆಡಳಿತಾಧಿಕಾರಿ ಕರ್ತವ್ಯ ಜೈನ್, ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.































































































































