28.5 C
Udupi
Tuesday, October 6, 2026
spot_img
spot_img
HomeBlogಚಿಂತಾಮಣಿ ರಾಜಕೀಯದಲ್ಲಿ ಸಂಚಲನ: ಆಸ್ತಿ, ವ್ಯವಹಾರದ ‘ಸ್ಫೋಟಕ’ ಮಾಹಿತಿ ಬಹಿರಂಗಪಡಿಸುವೆ ಎಂದ ಪ್ರದೀಪ್ ಈಶ್ವರ್

ಚಿಂತಾಮಣಿ ರಾಜಕೀಯದಲ್ಲಿ ಸಂಚಲನ: ಆಸ್ತಿ, ವ್ಯವಹಾರದ ‘ಸ್ಫೋಟಕ’ ಮಾಹಿತಿ ಬಹಿರಂಗಪಡಿಸುವೆ ಎಂದ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಪ್ರಭಾವಿ ರಾಜಕಾರಣಿ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ನಿರಂತರ ದ್ವೇಷ ಸಾಧಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ. ಶೀಘ್ರದಲ್ಲೇ ಅವರ ಆಸ್ತಿ ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಪ್ರದೀಪ್ ಈಶ್ವರ್, ಯಾವುದೇ ವಿಮರ್ಶೆಗೂ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೆಲವರನ್ನು ತಮ್ಮ ವಿರುದ್ಧ ಮಾತನಾಡುವಂತೆ ಪ್ರಚೋದಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಚಿಂತಾಮಣಿಯ ಪ್ರಭಾವಿ ರಾಜಕಾರಣಿಯ ಅಕ್ರಮಗಳು, ಹೈದರಾಬಾದ್‌ನ ಡಯಾಗ್ನಸ್ಟಿಕ್ ಸೆಂಟರ್ ಹಾಗೂ ಮುಂಬೈನಲ್ಲಿ ಪಡೆದಿರುವ ವಾಣಿಜ್ಯ ಸಂಕೀರ್ಣದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯ ಆಸ್ತಿಗಳ ಬಗ್ಗೆಯೂ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

‘ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ. ಆಲ್ ದಿ ಬೆಸ್ಟ್, ವೇಟ್ ಆ್ಯಂಡ್ ಸೀ’ ಎಂದು ಎದುರಾಳಿಗಳಿಗೆ ಸವಾಲು ಹಾಕಿರುವ ಪ್ರದೀಪ್ ಈಶ್ವರ್, ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಅವರ ಹೇಳಿಕೆ ಮಾಜಿ ಸಚಿವ ಎಂ.ಸಿ. ಸುಧಾಕರ್ ಅವರನ್ನು ಗುರಿಯಾಗಿಸಿಕೊಂಡಿರುವ ಪರೋಕ್ಷ ಆರೋಪ ಎಂಬ ಚರ್ಚೆ ಚಿಂತಾಮಣಿ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page