29.6 C
Udupi
Tuesday, April 21, 2026
spot_img
spot_img
HomeBlogCET ಪರೀಕ್ಷೆಗೆ ಕಡ್ಡಾಯ ಡ್ರೆಸ್ ಕೋಡ್: ಗಲಾಟೆ ತಪ್ಪಿಸಲು ಕೆಇಎ ಕಠಿಣ ಕ್ರಮ

CET ಪರೀಕ್ಷೆಗೆ ಕಡ್ಡಾಯ ಡ್ರೆಸ್ ಕೋಡ್: ಗಲಾಟೆ ತಪ್ಪಿಸಲು ಕೆಇಎ ಕಠಿಣ ಕ್ರಮ

ಬೆಂಗಳೂರು: ಕಳೆದ ವರ್ಷ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ಕುರಿತಾಗಿ ಉಂಟಾದ ವಿವಾದದ ಹಿನ್ನೆಲೆ ಈ ಬಾರಿ ಯಾವುದೇ ಗೊಂದಲ ಉಂಟಾಗದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಏಪ್ರಿಲ್ 23 ಮತ್ತು 24ರಂದು ಪರೀಕ್ಷೆ ನಡೆಯಲಿದ್ದು, ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ.

ಹಿಂದಿನ ಘಟನೆಗಳಿಂದ ಪಾಠ ಕಲಿತ ಪ್ರಾಧಿಕಾರ, ಈ ಬಾರಿ ಗಲಾಟೆ ತಪ್ಪಿಸಲು ಸಮಗ್ರ ಯೋಜನೆ ರೂಪಿಸಿದೆ. ರಾಜ್ಯದ ಎಲ್ಲಾ 750 ಪರೀಕ್ಷಾ ಕೇಂದ್ರಗಳಲ್ಲೂ ವಸ್ತ್ರ ಸಂಹಿತೆ ಮೇಲ್ವಿಚಾರಣೆಗೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಈ ವರ್ಷ ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲಿದ್ದು, ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಮತ್ತು ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಡ್ರೆಸ್ ಕೋಡ್ ಕುರಿತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.

ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್ ಮತ್ತು ಸರಳ ಪ್ಯಾಂಟ್ ಅನುಮತಿಸಿದ್ದು, ಜಿಪ್ ಪಾಕೆಟ್ ಅಥವಾ ಹೆಚ್ಚಿನ ಅಲಂಕಾರ ಇರುವ ಬಟ್ಟೆಗಳಿಗೆ ನಿರ್ಬಂಧ ಹೇರಲಾಗಿದೆ. ಶೂಗಳ ಬದಲು ಚಪ್ಪಲಿ ಧರಿಸಬೇಕು ಹಾಗೂ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳಿಗೂ ಸರಳ ಉಡುಪು ಕಡ್ಡಾಯವಾಗಿದ್ದು, ಡಿಸೈನ್ ಇರುವ ಅಥವಾ ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಹಾಗೂ ಹೀಲ್ಡ್ ಪಾದರಕ್ಷೆಗಳಿಗೆ ನಿಷೇಧ ವಿಧಿಸಲಾಗಿದೆ. ಜೊತೆಗೆ ಮೊಬೈಲ್, ಬ್ಲೂಟೂತ್, ವಾಚ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಕೆಲವು ಸ್ಟೇಷನರಿ ವಸ್ತುಗಳಾದ ಪೆನ್ಸಿಲ್, ಎರೇಸರ್, ಜಿಯೋಮೆಟ್ರಿ ಬಾಕ್ಸ್, ಪೇಪರ್ ಅಥವಾ ಲಾಗ್ ಟೇಬಲ್ ಮತ್ತು ಟೋಪಿ, ಮಾಸ್ಕ್, ಬಣ್ಣದ ಅಥವಾ ಲೋಹದ ನೀರಿನ ಬಾಟಲಿ ಹಾಗೂ ತಿಂಡಿ ತಿನಿಸುಗಳು ಪರೀಕ್ಷಾ ಕೇಂದ್ರಕ್ಕೆ ತರಲು ಅನುಮತಿ ಇರುವುದಿಲ್ಲ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page