73.98 ಲಕ್ಷ ನಿವಳ ಲಾಭ ಮತ್ತು ಶೇ.15 ಡಿವಿಡೆಂಟ್ ಘೋಷಣೆ

ಕಾರ್ಕಳ, ಸೆ.12: ಬಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., 5ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು 12-09-2026 ರಂದು ಸ್ವಾಗತ್ ಹೋಟೆಲ್, ಕಾರ್ಕಳದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷರಾದ ಶ್ರೀ. ಉದಯ ಶೆಟ್ಟಿ ಮುನಿಯಾಲು ಇವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 31-03-2026ರ ಅಂತ್ಯಕ್ಕೆ ಸೊಸೈಟಿಯು 26.93 ಕೋಟಿ ಠೇವಣಿ ಸಂಗ್ರಹಿಸಿ, 24.39 ಕೋಟಿ ಸಾಲ ನೀಡಿ, 51.32 ಕೋಟಿ ರೂಪಾಯಿ ವ್ಯವಹಾರದೊಂದಿಗೆ, 135 ಕೋಟಿ ವಹಿವಾಟನ್ನು ಮಾಡಿ, 73.98 ಲಕ್ಷ ಲಾಭವನ್ನು ಗಳಿಸಿ, ಶೇ.15 ಡಿವಿಡೆಂಡ್ ನೀಡಿರುವುದು ತುಂಬಾ ಸಂತೋಷದ ವಿಷಯ ಎಂದು ತಿಳಿಸಿದರು. ಈ ಅಭಿವೃದ್ಧಿಯಲ್ಲಿ ನಮ್ಮ ಸಂಘದ ಸದಸ್ಯರು, ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸೊಸೈಟಿಯು ಅಲ್ಪಾವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಯೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.
ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ.ಕೆ.ಮಂಜುನಾಥ ಶೆಟ್ಟಿ ಇವರು ಸಭೆಯಲ್ಲಿರುವ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು, ನಿರ್ದೇಶಕರಾದ ಶ್ರೀ. ಎಂ. ಸುಧಾಕರ್ ಶೆಟ್ಟಿ ಮಹಾಸಭೆಯ ನೋಟೀಸನ್ನು ಓದಿದರು, ನಿರ್ದೆಶಕರಾದ ಶ್ರೀಮತಿ.ವಿನಯ ಅರುಣ್ ಶೆಟ್ಟಿ ಇವರು 4ನೇ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು,
2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ.ಕಿಶೋರ್ ಶೆಟ್ಟಿ ಇವರು ಮಂಡಿಸಿದರು, ನಿರ್ದೇಶಕರಾದ ಶ್ರೀ.ಎಂ.ಪ್ರಸನ್ನ ಶೆಟ್ಟಿ ಇವರು 2025-26ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮಾಡಿದರು, ನಿರ್ದೇಶಕರಾದ ಶ್ರೀ.ಕೆ.ನವೀನ್‌ಚಂದ್ರ ಶೆಟ್ಟಿ ಇವರು 2025-26ನೇ ಸಾಲಿನ ನೈಜ ಆಯ-ವ್ಯಯ ಲೆಕ್ಕಪತ್ರವನ್ನು ಮಂಡಿಸಿದರು, ನಿರ್ದೇಶಕರಾದ ಶ್ರೀ.ಪ್ರಶಾಂತ್ ಶೆಟ್ಟಿ ಇವರು 2025-26ನೇ ಸಾಲಿನ ಬಜೆಟಿಗಿಂತ ಜಾಸ್ತಿ ಖರ್ಚಾದ ಐವೇಜಿಗೆ ಮಂಡನೆ ಮತ್ತು ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಕೃಷ್ಣ ಎಂ. ಶೆಟ್ಟಿ ಇವರು 2026-27ನೇ ಸಾಲಿನ ಬಜೆಟನ್ನು ಮಂಡನೆ ಮಾಡಿದರು, ನಿರ್ದೇಶಕರಾದ ಶ್ರೀ.ರಮೇಶ್ ಶೆಟ್ಟಿ ಇವರು ಲೆಕ್ಕ ಪರಿಶೋಧಕರು ವರದಿಯಲ್ಲಿ ಸೂಚಿಸಿರುವ ನ್ಯೂನತೆಗೆ ಅನುಪಾಲನ ವರದಿಯನ್ನು ಮಂಡಿಸಿದರು, ನಿರ್ದೇಶಕರಾದ ಶ್ರೀ.ಸಚ್ಚೇಂದ್ರ ಶೆಟ್ಟಿ ಇವರು 2025-26ನೇ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಮಂಡಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಶ್ರೀಮತಿ, ಸುನಿತಾ ಎಸ್. ಶೆಟ್ಟಿ ಉಪಸ್ಥಿತರಿದ್ದು, ಸಭೆಯ ಪ್ರಾರಂಭದಲ್ಲಿ ಕುಮಾರಿ ತೇಜಸ್ವಿ ಶೆಟ್ಟಿ ಇವರು ಪ್ರಾರ್ಥನೆಯನ್ನು ಮಾಡಿದರು ಮತ್ತು ನಿರ್ದೇಶಕರಾದ ಶ್ರೀ.ಪ್ರದೀಪ್ ಕುಮಾರ್ ಶೆಟ್ಟಿ ಇವರು ವಂದನಾರ್ಪನೆ ಮಾಡಿದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಸೊಸೈಟಿಯ ಸದಸ್ಯರಾದ ಶ್ರೀ.ಬಾಲಕೃಷ್ಣ ಶೆಟ್ಟಿ ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ 10 ಜನ ಆರ್ಥಿಕ ಹಿಂದುಳಿದ ಬಡ ಕುಟುಂಬದವರಿಗೆ ಧನ ಸಹಾಯವನ್ನು ನೀಡಿದರು ಹಾಗೂ 10 ಪ್ರಗತಿಪರ ಕೃಷಿಕರಿಗೆ ಮತ್ತು ಸಾಧಕರಿಗೆ ಸನ್ಮಾನವನ್ನು ಮಾಡಿದರು.






























































































































