
ಕಾಂತಾವರ: ಕಾಂತಾವರ ಕುಡ್ತಕ್ಯಾರ್ ನಿವಾಸಿ ಶಿವಾನಂದ್ ಅವರ ಪತ್ನಿ ಗೀತಾ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ಗೆಳೆಯರ ಬಳಗ ಕಾಂತಾವರ (ರಿ.) ವತಿಯಿಂದ ವೈದ್ಯಕೀಯ ಚಿಕಿತ್ಸೆಯ ಸಹಾಯಾರ್ಥವಾಗಿ ₹33,200 ಆರ್ಥಿಕ ನೆರವು ನೀಡಲಾಯಿತು.
ಅಗತ್ಯವಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚಿ, ಮಾನವೀಯತೆ ಮೆರೆದ ದಾನಿಗಳ ಸಹಕಾರಕ್ಕೆ ಗೆಳೆಯರ ಬಳಗದ ವತಿಯಿಂದ ಹೃತ್ಪೂರ್ವಕ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷರಾದ ಅರುಣ್ ಪುತ್ರನ್, ಅಧ್ಯಕ್ಷರಾದ ಆಶಿಕ್ ಪೂಜಾರಿ,ಕಾರ್ಯದರ್ಶಿ ಪ್ರದೀಪ್ ಪೂಜಾರಿ,ಕೋಶಾಧಿಕಾರಿ ಕಾಂತೇಶ್ ಭಟ್ ಹಾಗೂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.



















































































