ದ್ವಿತೀಯ ವರ್ಷದ, ಕೆಸರ್ಡೊಂಜಿ ದಿನ

ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಮತ್ತು ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಮರ್ಣೆ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದು ಬಾಂಧವರಿಗೆ ಕೆಸರುಡು ಒಂಜಿ ದಿನ ಕಾರ್ಯಕ್ರಮ ದಿನಾಂಕ 4 ಆಗಸ್ಟ್ 2024ನೇ ರವಿವಾರದಂದು ಅಜೆಕಾರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಗದ್ದೆಯಲ್ಲಿ ನಡೆಯಿತು.
ಈ ವೇದಿಕೆಯಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ಭಟ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕುಂಠಿನಿ, ತುಳುನಾಡ ತುಡರ್ ನಮ್ಮ ತುಳುನಾಡು ಟ್ರಸ್ಟ್ ರಾಜ್ಯ ಸಂಚಾಲಕರು ಕೀರ್ತಿ ಕಾರ್ಕಳ ,ಪ್ರಶಾಂತ್ ಶೆಟ್ಟಿ ಕುಂಠಿನಿ ,ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಹರೀಶ್ ನಾಯಕ್ ,ಮಹಿಳಾ ಪ್ರಮುಖರಾದ ಶ್ರೀಮತಿ ವಿದ್ಯಾಪೈ ,ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ಬೋಜ ಮಡಿವಾಳ, ಭಜನಾ ಮಂಡಳಿಯ ಕೋಶಾಧಿಕಾರಿ ಡಾ. ಜನಾರ್ಧನ ನಾಯಕ್, ಹಿಂದೂ ಸಂಘಟನಾ ಮುಖಂಡ ರತ್ನಾಕರ ಅಮೀನ್, ಕೆಸರುಡು ಒಂಜಿ ದಿನ ಈ ಕಾರ್ಯಕ್ರಮದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ನ ಮಂಜುನಾಥ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.













