28.5 C
Udupi
Tuesday, April 21, 2026
spot_img
spot_img
HomeBlogಪರಶುರಾಮನ ಕಂಚಿನ ಪ್ರತಿಮೆಯ ಅಸಲಿಯತ್ತು ಪೋಲೀಸ್ ತನಿಖೆಯಿಂದ ಬಯಲು

ಪರಶುರಾಮನ ಕಂಚಿನ ಪ್ರತಿಮೆಯ ಅಸಲಿಯತ್ತು ಪೋಲೀಸ್ ತನಿಖೆಯಿಂದ ಬಯಲು

ಕಾರ್ಕಳ ಶಾಸಕರ ರಾಜೀನಾಮೆಗೆ ಆಗ್ರಹಿಸಿ ,ಬೃಹತ್ ಪಾದಯಾತ್ರೆಗೆ ಸಿದ್ದತೆ : ಶುಭದ ರಾವ್

ಕಾರ್ಕಳ: ರಶುರಾಮನ ಕಂಚಿನ ಪ್ರತಿಮೆ ವಿಚಾರವಾಗಿ ಜನತೆಗೆ ನಿರಂತರ ಸುಳ್ಳು ಹೇಳುತ್ತಿದ್ದ ಶಾಸಕರ ನಿಜ ಬಣ್ಣ ಪೋಲೀಸ್ ತನಿಖೆಯಿಂದ ಬಯಲಾಗಿದೆ, ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪ್ರತಿಮೆ ಕಂಚಿನದ್ದು ಅಲ್ಲ ಎಂಬುದು ಪೋಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಬಿಡಿ ಭಾಗಗಳಿಂದ ಬಹಿರಂಗವಾಗುತ್ತದೆ, ಬೆಟ್ಟದ ಮೇಲೆ ಎರಡು ಕಾಲುಗಳ ಮೇಲೆ ಅರ್ಧ ಭಾಗ ನಿಂತಿರುವಾಗ ವಶಪಡಿಸಿಕೊಂಡಿರುವ ಬಿಡಿ ಭಾಗಗಳಲ್ಲೂ ಎರಡು ಕಾಲು ಇದ್ದು ಪ್ರತಿಮೆಗೆ ನಾಲ್ಕು ಕಾಲು ಇರಲು ಹೇಗೆ ಸಾದ್ಯ ಎಂಬ ಪ್ರಶ್ನೆ ‌ಮೂಡಿದೆ ಈ ಎಲ್ಲಾ ವಿಚಾರವಾಗಿ ಮೊದಲಿನಿಂದಲೂ ಜನತೆಗೆ ನಿರಂತರ ಸುಳ್ಳು ಹೇಳುತ್ತಾ ಬಂದಿರುವ ಶಾಸಕರು ಮಾಡಿರುವುದು ಧರ್ಮ ದ್ರೋಹದ ಕೆಲಸ‌ವಾಗಿದೆ ಅವರು ಇನ್ನಾದರೂ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಬೇಕೆಂದು ಮತ್ತು ಅವರ ತಕ್ಷಣ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಸಿದ್ದತೆ ನಡೆಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ.

ಪ್ರತಿಮೆ ನಿರ್ಮಾತ ಕೃಷ್ಣನಾಯ್ಕ್ ಮಹಾನ್ ಸುಳ್ಳುಗಾರ ಇಲ್ಲವಾದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಅಗತ್ಯವೇನಿದೆ, ಈಗ ಜಾತಿ ಮತ್ತು ಧರ್ಮವನ್ನು ಎಳೆದು ತಂದು ಕೋಮು ಗಲಭೆಯ ಹುನ್ನಾರ ನಡೆಸುತ್ತಿದ್ದಾರೆ ಅವರ ವಿರುದ್ದ ದೂರು ದಾಖಲಿಸಲಾಗುವುದು.

ಸತ್ಯವನ್ನು ಎಷ್ಟೇ ಮುಚ್ಚಿಟ್ಟರೂ ಅದು ಬಹಿರಂಗವಾಗಲೇ ಬೇಕು, ಸತ್ಯಾಸತ್ಯತೆಯನ್ನು ತಿಳಿಸುವ ಪ್ರಯತ್ನಪಟ್ಟಾಗ ಕಾಂಗ್ರೇಸ್ ಕಾರ್ಯಕರ್ತರ ಮೇಲೆ ಪೋಲೀಸ್ ಕೇಸು ದಾಖಲಿಸಿ ಬೆದರಿಸಲಾಯಿತು, ಅನ್ಯಾಯದ ವಿರುದ್ದ ಮಾತನಾಡಿದವರನ್ನು ಅವಮಾನಿಸಲಾಯಿತು, ಅದರೆ ಸತ್ಯಕ್ಕೆ ಗೆಲುವಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ಶುಭದರಾವ್
ವಕ್ತಾರರು, ಬ್ಲಾಕ್ ಕಾಂಗ್ರೆಸ್ ‌ಕಾರ್ಕಳ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page