
ತಿರುಪತಿ ದೇವಸ್ಥಾನದಲ್ಲಿ ಗುತ್ತಿಗೆದಾರರೊಬ್ಬರ ಮೇಲ್ವಿಚಾರಣೆಯಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತಿದೆ, ಭಕ್ತರಿಗೆ ಹಂಚುವ ಲಡ್ಡುಗಳು ತಾಜಾ ಅಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಇದರ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿದ ದೇವಸ್ಥಾನದ ಆಡಳಿತ ಮಂಡಳಿಯು ಹಲವಾರು ವರ್ಷಗಳಿಂದ ಲಡ್ಡುಗಳನ್ನು ವೈಷ್ಣವ ಬ್ರಾಹ್ಮಣರು ತಯಾರಿಸುತ್ತಿದ್ದಾರೆ. ನಿತ್ಯವೂ ಹೊಸತಾಗಿಯೇ ಲಡ್ಡುಗಳು ಸಿದ್ಧಗೊಳ್ಳುತ್ತವೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದೆ.
ಲಡ್ಡೂ ತಯಾರಿಕೆಯಲ್ಲಿ ಸುಮಾರು 980 ಜನರು ಕೆಲಸ ಮಾಡುತ್ತಿದ್ದಾರೆ, ಬಹಳಷ್ಟು ವರ್ಷಗಳಿಂದ ಇದೇ ಪರಂಪರೆ ಮುಂದುವರೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀವಾರಿ ಲಡ್ಡುಗಳ ಬಗ್ಗೆ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.



















































































