
ಸ.ಕಿ.ಪ್ರಾ.ಶಾಲೆ ಪರಪ್ಪಾಡಿ ನಲ್ಲೂರು ಇಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭಿಮಾನಿಗಳಿಂದ ಮಕ್ಕಳಿಗೆ ಬೇಕಾದ ಪುಸ್ತಕ ಪರಿಕರಗಳನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು. ಪರಿಕರಗಳನ್ನು ನೀಡಿದ ದಾನಿಗಳು ಶ್ರೀಮತಿ ಪ್ರತಿಮಾ ವಿ. ಶೆಟ್ಟಿ ಅವರಿಂದ ನೋಟ್ಸ್ ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳು, ಶ್ರೀಮತಿ ಗಾಯತ್ರಿ ಪ್ರಭು ರವರ ಅಳಿಯ ಕಾಚಿಕಲ್ ರವೀಶ್ ನಾಯಕ್ ಅವರು ನೋಟ್ಸ್ ಪುಸ್ತಕ, ಕಾಪಿಪುಸ್ತಕಗಳು, ಅವಿನಾಶ್ ಶೆಟ್ಟಿ ಕಾರ್ಕಳ ಇವರಿಂದ ಕೊಡೆಗಳು, ಅಮ್ಮ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನೀಚರ್ ಮಾಲೀಕರಿಂದ
ನೀರಿನ ಸ್ಟೀಲ್ ಬಾಟಲಿಗಳು, ಸ್ವಾತಿನಿ ಜೈನ್ ಅವರಿಂದ 1 ನೇ ತರಗತಿ ಮಕ್ಕಳಿಗೆ ಬ್ಯಾಗ್ ಹಾಗೂ ಎಲ್ಲಾ ಮಕ್ಕಳಿಗೆ ಶ್ರೀಮತಿ ಸವಿತಾ ಸುಧಾಕರ ಶೆಟ್ಟಿ ಅವರಿಂದ ಶಾಲಾ ಬ್ಯಾಗ್. ವಿತರಣಾ ಭಾಗವಹಿಸಿದ ಗಣ್ಯರು ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶೋಕ ಪೂಜಾರಿ, ಪ್ರಮುಖ ದಾನಿಗಳಾದ ಮಾಜಿ
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ಎಲ್.ಶೆಟ್ಟಿ ,ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಸಮಾಜಸೇವಕಿ ಗಾಯತ್ರಿ ಪ್ರಭು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕರು, ಪೋಷಕರು ಭಾಗವಹಿಸಿದ್ದರು.ಮುಖ್ಯೋಪಧ್ಯಾಯರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು



































