ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ,

ಸರಕಾರಿ ಪ್ರೌಢಶಾಲೆ ನಕ್ರೆ ಕಾರ್ಕಳ ಇಲ್ಲಿನ 10 ನೆ ತರಗತಿ ವಿದ್ಯಾರ್ಥಿ ಗಳಾದ ಸಂಪ್ರಿತ್ ನಾಯ್ಕ್ ಹಾಗೂ ಪ್ರಣೇಶ್ ಇವರು ದಿನಾಂಕ:12/11/2026 ಮತ್ತು 13-11-2026 ರಂದು ಶ್ರೀ ಆದಿಚುಂಚನ ಗಿರಿ ಮಹಾ ಸಂಸ್ಥಾನ ಮಠ ನಾಗಮಂಗಲ ಮಂಡ್ಯ ಇಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ನಾಗಮಂಗಲ ಜಿಲ್ಲೆ ,ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ನಡೆದ ವಿಭಾಗ ಮಟ್ಟ ಹಾಗೂ ರಾಜ್ಯ ಮಟ್ಟದ 17 ರೊಳಗಿನ ವಯೋಮಿತಿಯ ಆರ್ಟಿಸ್ಟಿಕ್ ಪೆಯರ್ ( ARTISTIC PAIR) ಯೋಗಾಸನ ಸ್ಪರ್ಧೆಯಲ್ಲಿ
ಸರಕಾರಿ ಪ್ರೌಢಶಾಲೆ ನಕ್ರೆ ಇಲ್ಲಿನ 10 ನೇ ತರಗತಿಯ ವಿದ್ಯಾರ್ಥಿಗಳಾದ ಸಂಪ್ರೀತ್ ಆರ್ ನಾಯ್ಕ ಹಾಗೂ ಪ್ರಣೇಶ್ ಮಂಡ್ಯದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ನಂತರ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ತ್ರತೀಯ ಸ್ಥಾನ ಪಡೆದಿರುತ್ತಾರೆ.ಇವರಿಗೆ ಯೋಗ ಶ್ರೀ ಅಶೋಕ್ ರವರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರೇಣುಕಾ ಇವರು ತರಬೇತಿ ನೀಡಿರುತ್ತಾರೆ.
ಇವರಿಗೆ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, SDMC ಅಧ್ಯಕ್ಷ ರು & ಸರ್ವ ಸದಸ್ಯರು, ಪೋಷಕರು ಶುಭ ಹಾರೈಸಿದರು.






















































































