24.1 C
Udupi
Monday, November 9, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 685

ಭರತೇಶ್ ಶೆಟ್ಟಿ,ಎಕ್ಕಾರು

ರಾಜರ್ಷಿ ಶತಯೂಪನಿಗೆ ನಾರದರು ಆತನ ಮನದ ಜಿಜ್ಞಾಸೆ ಕೇಳಲು ಅನುಮತಿ ನೀಡಿದರು. ಆಗ “ಪೂಜ್ಯರೇ! ನೀವು ಸರ್ವ ವೃತ್ತಾಂತಗಳ ತತ್ವಗಳೆಲ್ಲವನ್ನೂ ಬಲ್ಲವರಾಗಿದ್ದೀರಿ. ಮಾತ್ರವಲ್ಲ ತಮ್ಮ ದಿವ್ಯ ದೃಷ್ಟಿಯಿಂದ ಜನರಿಗೆ ನಾನಾ ಪ್ರಕಾರವಾದ ಯಾವ ಯಾವ ಗತಿಗಳು ಲಭಿಸುತ್ತದೆ ಎಂಬುವುದನ್ನು ವರ್ತಮಾನ ಕಾಲದಲ್ಲಿ ಪ್ರತ್ಯಕ್ಷ ಕಂಡು ತಿಳಿದು ಹೇಳಬಲ್ಲ ತ್ರಿಕಾಲ ಜ್ಞಾನ ಹೊಂದಿದ್ದೀರಿ. ದೇವಲೋಕದಲ್ಲಿ ಯಾರೆಲ್ಲ ಭೂಲೋಕದಿಂದ ಹೋಗಿ ಸೇರಿದ್ದಾರೆ? ಅಲ್ಲಿ ಏನು ಚರ್ಚೆಗಳಾಗುತ್ತಿವೆ? ಎಂಬಿತ್ಯಾದಿ ವಿಚಾರಗಳನ್ನು ಸ್ವಯಂ ನೀವು ಅಲ್ಲಿಗೆ ಹೋಗಿ ನೋಡಿ ಬರಬಲ್ಲ ತ್ರೈಲೋಕ ಸಂಚಾರಿಗಳು ನೀವಾಗಿದ್ದೀರಿ. ಮಹರ್ಷಿಗಳೇ! ನಿಮ್ಮಲ್ಲಿ ನನ್ನ ಪ್ರಶ್ನೆ ಏನೆಂದರೆ ಧೃತರಾಷ್ಟ್ರನಿಗೆ ಯಾವ ಪುಣ್ಯಲೋಕಗಳು ಸಿದ್ಧವಾಗಿವೆ? ಅಲ್ಲಿ ಈ ಕುರುರಾಜನಿಗೆ ಯಾವ ಸ್ಥಾನ ಲಭಿಸಲಿದೆ? ಸಿಕ್ಕಿದರೂ ಯಾವಾಗ ಮತ್ತು ಹೇಗೆ ಸಿಗಬಹುದು? ಎಂಬುವುದನ್ನು ತಿಳಿಸಬಹುದೆ” ಎಂದು ಪ್ರಶ್ನಿಸಿದನು.

ಹೇ ರಾಜರ್ಷಿ ಶತಯೂಪನೇ! ನೀನು ಕೇಳಿರುವುದು ದೇವ ರಹಸ್ಯ ವಿಚಾರ. ಈ ಸತ್ಯವನ್ನು ನಾನು ಎಲ್ಲರಿಗೂ ತಿಳಿಸುವಂತಿಲ್ಲ. ಆದರೆ ಪ್ರಶ್ನೆ ಕೇಳಿದ ನೀನು ಮತ್ತು ಇಲ್ಲಿ ನೆರೆದಿದ್ದು ಕೇಳಲು ಉತ್ಸುಕರಾಗಿರುವ ಎಲ್ಲರೂ ಋಷಿಗಳಾಗಿರುವಿರಿ. ವೇದಧನರೂ, ತಪೋನಿಧಿಗಳೂ ಆಗಿರುವ ನೀವೆಲ್ಲರು ತಪಸ್ಸಿನ ಮೂಲಕ ಪಾಪಗಳೆಲ್ಲವನ್ನೂ ಕಳೆದುಕೊಂಡಿರುವಿರಿ. ಆದುದರಿಂದ ನೀವು ಈ ರಹಸ್ಯ ತಿಳಿಯಬಹುದಾದ ಯೋಗ್ಯತೆಯನ್ನು ಹೊಂದಿದವರಾಗಿದ್ದೀರಿ. ಹಾಗಾಗಿ ಈ ರಹಸ್ಯವನ್ನು ನಿಮಗೆ ತಿಳಿಸುತ್ತೇನೆ. ಹೇ ರಾಜರ್ಷಿಯೇ! ನಾನು ಸ್ವೇಚ್ಚೆಯಿಂದ ಅಲ್ಲಲ್ಲಿ ಸಂಚರಿಸುತ್ತಿರುವ ಸಮಯ ಇಂದ್ರನ ಸಭೆಗೂ ಹೋಗುತ್ತಿರುತ್ತೇನೆ. ಹಾಗೆ ಹೋದಾಗ ನಿನ್ನ ಪಿತನಾದ (ಶತಯೂಪನ) ಸಹಸ್ರಚಿತ್ಯನೂ ಸ್ವರ್ಗದಲ್ಲಿದ್ದನು. ಕೇಕಯರಾದ ನಿಮಗೆ ಅಧಿಪತಿಯಾಗಿದ್ದ, ಸರ್ವ ವಿಭಾಗದಲ್ಲೂ ಶ್ರೀಮಂತನಾಗಿದ್ದ, ಭಯವೆಂಬುವುದನ್ನು ಕಾಣದಾಗಿದ್ದ ಮಹಾರಾಜನು ರಾಜರ್ಷಿಯಾದ ನಿನಗೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟು ತಪೋಮಾರ್ಗ ಮೂಲಕ ಸ್ವರ್ಗವನ್ನೇರಿದ್ದಾನೆ. ಅದೇ ರೀತಿ ಭಗದತ್ತನ ತಂದೆಯಾದ ಶೈಲಾಲಯ, ಮಾಂಧಾತೃವಿ‌ನ ಮಗನಾದ ಪುರುಕುತ್ಸ ರಾಜ, ಪರಮಧಾರ್ಮಿಕನಾದ ರಾಜ ಶಶಲೋಮ ಮೊದಲಾದವರೆಲ್ಲ ನಿಮ್ಮಂತೆಯೆ ವೃದ್ಧರಾದಾಗ ಅಧಿಕಾರ ತ್ಯಾಗ ಮಾಡಿ ತಪೋವನ ಸೇರಿ ತಪಸ್ಸಿನ ಮೂಲಕ ಸ್ವರ್ಗವೇರಿದ್ದಾರೆ.

ನಾನು ಕಾರ್ಯ ಕಾರಣಗಳಿಂದ ಸ್ವರ್ಗಕ್ಕೆ ಹೋಗುತ್ತಿದ್ದಾಗ ಪಾಂಡು ಚಕ್ರವರ್ತಿ ಸದ್ಗತಿ ಪ್ರಾಪ್ತವಾಗದೆ ಇದ್ದುದನ್ನು ನೋಡಿದ್ದೆನು. ಆತನ ಮಕ್ಕಳಾದ ಪಾಂಡವರು ರಾಜಸೂಯ ಯಾಗ ವಿರಚಿಸಿ ಪುಣ್ಯ ಫಲ ದಾನ ಮಾಡಿದ ಬಳಿಕ ಪುಣ್ಯೋಪೇತನಾದ ಪಾಂಡುವಿಗೆ ಉತ್ತಮ ಗತಿ ಪ್ರಾಪ್ತವಾಯಿತು. ಇದಾದ ನಂತರ ಒಮ್ಮೆ ಸ್ವರ್ಗಕ್ಕೆ ಹೋಗಿದ್ದಾಗ ನರಪತಿಯಾದ ಪಾಂಡು ಮತ್ತು ದೇವಪತಿಯಾದ ಇಂದ್ರ ಜೊತೆಯಾಗಿ ಕುರುರಾಜನಾದ ಧೃತರಾಷ್ಟ್ರನ ಕುರಿತಾಗಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಅಂದಿನ ಪ್ರಸ್ತಾಪದ ಪ್ರಕಾರ ಇನ್ನು ಧೃತರಾಷ್ಟ್ರನ ಆಯುಷ್ಯ ಪರಮಾವಧಿಯನ್ನು ಮುಟ್ಟಲು ಮೂರು ವರ್ಷಗಳು ಮಾತ್ರ ಉಳಿದಿವೆಯೆಂಬ ಸಂಗತಿ ತಿಳಿದುಕೊಂಡಿದ್ದೆನು. ಈ ವಿಚಾರವನ್ನು ಸ್ವತಃ ದೇವರಾಜ ಇಂದ್ರನು ಹೇಳಿದ್ದನು. ಮೂರು ವರ್ಷಗಳು ಕಳೆದು ಋಷಿಪುತ್ರನಾದ (ವ್ಯಾಸ ಪುತ್ರ ಎಂಬ ಅರ್ಥದಲ್ಲಿ) ಧೃತರಾಷ್ಟ್ರ ಮಹಾಭಾಗ್ಯಶಾಲಿಯಾಗಿ ತಪಸ್ಸಿನ ಮೂಲಕ ಪಾಪಗಳೆಲ್ಲವನ್ನು ಕಳೆದುಕೊಂಡು ಇಹಲೋಕವನ್ನು ತೊರೆದು ಗಾಂಧಾರಿ ಸಹಿತನಾಗಿ ಕುಬೇರನ ಅರಮನೆ ಸೇರಲಿದ್ದಾನೆ. ಅಲ್ಲಿ ಕುರುಶ್ರೇಷ್ಠನಾದ ಧೃತರಾಷ್ಟ್ರ ಕುಬೇರನಿಂದ ಸತ್ಕೃತನಾಗಿ ದಿವ್ಯವಾದ ಆಭರಣಗಳನ್ನು ಧರಿಸಿ ಇಚ್ಚೆ ಬಂದ ಕಡೆ ಹೋಗುವ ವಿಮಾನದಲ್ಲಿ ಕುಳಿತು ದೇವ, ಗಂಧರ್ವ ಹಾಗೂ ರಾಕ್ಷಸರ ಲೋಕಗಳಲ್ಲಿ ಸಂಚರಿಸುವ ಯೋಗ ಪಡೆಯಲಿದ್ದಾನೆ ಎಂದು ದೇವರಾಜನು ನುಡಿದಿದ್ದಾನೆ.” ಹೀಗೆ ನಾರದರು ಕುಂತಿ, ವಿದುರ, ಸಂಜಯ, ಧೃತರಾಷ್ಟ್ರ, ಮತ್ತು ಗಾಂಧಾರಿಯರ ಪರಲೋಕ ಗತಿಯ ರಹಸ್ಯವನ್ನು ಬಹಿರಂಗಗೊಳಿಸಿದರು.

ದೇವ ಋಷಿಗಳ ಸುಮಧುರವಾದ ಈ ಮಾತನ್ನು ಕೇಳಿ ಎಲ್ಲರಿಗೂ ಪರಮ ಪ್ರೀತಿಯಾಯಿತು. ಧೃತರಾಷ್ಟ್ರನಿಗೂ ಬಹಳ ಹರ್ಷವಾಯಿತು. ಬಳಿಕ ನಾರದರು ಅನೇಕ ಪ್ರಕಾರದ ಕಥೆಗಳನ್ನು ಹೇಳಿ ಅಲ್ಲಿದ್ದ ಎಲ್ಲರನ್ನು ಸಂತೋಷಗೊಳಿಸಿ ಮತ್ತಷ್ಟು ಶ್ರೇಷ್ಠತರವಾದ ತಪಸ್ಸನ್ನಾಚರಿಸಲು ಪ್ರೇರಣೆ ನೀಡಿದರು. ನಾರದರು ಎಲ್ಲರನ್ನು ಹರಸಿ ಇಚ್ಚಾಗಮನದ ಶಕ್ತಿಯುಳ್ಳವರಾದ ಕಾರಣ ಸಿದ್ಧರ ಗತಿಯನ್ನು ಆಶ್ರಿತರಾಗಿ ಎತ್ತಲೊ ಹೊರಟು ಹೋದರು.

ಮುಂದುವರಿಯುವುದು…

spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page