ಕಪ್ಗೆ ₹ 5 ಹೆಚ್ಚಳ!

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್ಗೆ ₹ 8ರಿಂದ ₹ 12ರವರೆಗೆ ಹೆಚ್ಚಳವಾದ ಬೆನ್ನಲ್ಲೇ, ಇದೀಗ ಕಾಫಿ ಮತ್ತು ಟೀ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನವೆಂಬರ್ 1ರಿಂದ ಹಾಲಿನ ಪರಿಷ್ಕೃತ ದರ ಜಾರಿಯಾಗಿದ್ದು, ಇದರ ಪರಿಣಾಮವಾಗಿ ರಾಜ್ಯಾದ್ಯಂತ ಹೋಟೆಲ್ಗಳು ಮತ್ತು ಕೆಫೆಗಳಲ್ಲಿ ಕಾಫಿ, ಟೀ ಬೆಲೆಯನ್ನು ₹ 5ರವರೆಗೆ ಹೆಚ್ಚಿಸಲಾಗಿದೆ.
ಕಾಫಿ, ಟೀ ದರದಲ್ಲಿ ₹ 5 ಏರಿಕೆ
ರಾಜ್ಯದಾದ್ಯಂತ ಹೋಟೆಲ್ಗಳಲ್ಲಿ ಒಂದು ಕಪ್ ಕಾಫಿ ಮತ್ತು ಟೀ ಬೆಲೆಯನ್ನು ₹ 5ರಷ್ಟು ಹೆಚ್ಚಿಸಲಾಗಿದ್ದು, ನೂತನ ದರ ನವೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಹಾಲಿನ ಬೆಲೆ ಏರಿಕೆಯಿಂದ ಹೋಟೆಲ್ಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಇದರ ಪರಿಣಾಮ ಮುಂದಿನ ದಿನಗಳಲ್ಲಿ ಹಾಲಿನಿಂದ ತಯಾರಿಸುವ ಸಿಹಿತಿಂಡಿಗಳು ಸೇರಿದಂತೆ ಇಡ್ಲಿ, ದೋಸೆ ಹಾಗೂ ಮಧ್ಯಾಹ್ನದ ಊಟದ ದರಗಳೂ ಹೆಚ್ಚಾಗುವ ಸಾಧ್ಯತೆಯಿದೆ.
ನಂದಿನಿ ಹಾಲಿನ ಪರಿಷ್ಕೃತ ದರ ಪಟ್ಟಿ (ಪ್ರತಿ ಲೀಟರ್ಗೆ):
- ಟೋನ್ಡ್ ಹಾಲು: ₹ 46ರಿಂದ ₹ 54
- ಹೋಮೋಜಿನೈಸ್ಡ್ ಟೋನ್ಡ್ ಹಾಲು: ₹ 47ರಿಂದ ₹ 56
- ಹೋಮೋಜಿನೈಸ್ಡ್ ಹಸುವಿನ ಹಾಲು: ₹ 50ರಿಂದ ₹ 58
- ಸ್ಪೆಷಲ್ ಟೋನ್ಡ್ ಹಾಲು: ₹ 52ರಿಂದ ₹ 64
- ಶುಭಂ ಹಾಲು: ₹ 52ರಿಂದ ₹ 64
- ಹೋಮೋಜಿನೈಸ್ಡ್ ಶುಭಂ ಹಾಲು: ₹ 53ರಿಂದ ₹ 65
ಹಿಂದಿನ ದರ ಏರಿಕೆ ಯಾವಾಗ?
ಸರ್ಕಾರ ಕೊನೆಯದಾಗಿ ಏಪ್ರಿಲ್ 1, 2025ರಂದು ಪ್ರತಿ ಲೀಟರ್ ಹಾಲಿನ ದರವನ್ನು ₹ 4 ಹೆಚ್ಚಿಸಿತ್ತು. ಇದಕ್ಕೂ ಮೊದಲು 2024ರ ಜೂನ್ನಲ್ಲಿ 500 ಮಿಲಿ ಪ್ಯಾಕೆಟ್ಗೆ ಹೆಚ್ಚುವರಿ 50 ಮಿಲಿ ಹಾಲು ನೀಡುವ ನಿರ್ಧಾರದ ಹಿನ್ನೆಲೆಯಲ್ಲಿ ಲೀಟರ್ಗೆ ₹ 2 ದರ ಏರಿಕೆ ಮಾಡಲಾಗಿತ್ತು.

























