ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ “ಊದು ಪೂಜೆ (ಪಿಲಿ ನಲಿಕೆ)”

ಎರಡನೇ ವರ್ಷದ ಬೈಲೂರು ಟೈಗರ್ಸ್ ತಂಡದ
ಅದ್ದೂರಿ ಊದು ಪೂಜೆ (ಪಿಲಿ ನಲಿಕೆ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಬೈಲೂರು ಶ್ರೀ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ಬಿಡುಗಡೆ ಮಾಡಲಾಯಿತು.
ಕರಕರಿ ಫ್ರೆಂಡ್ಸ್ ಸಾರಥ್ಯದಲ್ಲಿ, ಬೈಲೂರು ಟೈಗರ್ಸ್ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ದ್ವಿತೀಯ ವರ್ಷದ ಊದುಪೂಜೆ (ಪಿಲಿನಲಿಕೆ) ಸಂಜೆ 4:30ಕ್ಕೆ ವಿಶೇಷ ಆಕರ್ಷಣೆಯೊಂದಿಗೆ ವೈಭವದ ಮೆರವಣಿಗೆ ಅಕ್ಟೋಬರ್ 10 ಶನಿವಾರ ಗಾಂಧೀ ಸ್ಮಾರಕ ಭವನ ಬೈಲೂರು ಇಲ್ಲಿ ನಡೆಯಲಿದೆ.






















