25.7 C
Udupi
Thursday, October 1, 2026
spot_img
spot_img
HomeBlog‘ಉರ್ದು ಹಬ್ಬ’ಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲು ವೇದಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ಕಿಡಿ

‘ಉರ್ದು ಹಬ್ಬ’ಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲು ವೇದಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನವೆಂಬರ್ 9ರಂದು ಉರ್ದು ದಿನದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಖಾದರ್ ಹೇಳಿಕೆ ಬೆನ್ನಲ್ಲೇ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್, ವಿಧಾನಸೌಧವು ಕನ್ನಡಿಗರ ಅನನ್ಯತೆಯ ಸಂಕೇತವಾಗಿದ್ದು, ಅದನ್ನು ನಿರ್ದಿಷ್ಟ ಸಮುದಾಯದ ಮತಬ್ಯಾಂಕ್ ಓಲೈಕೆಗೆ ಬಳಸಬಾರದು ಎಂದು ಹೇಳಿದ್ದಾರೆ.

ಉರ್ದು ಭಾಷೆಯ ವಿರೋಧವಲ್ಲ ಎಂದಿರುವ ಅವರು, ಉರ್ದು ಭಾಷೆಯನ್ನು ಪ್ರೋತ್ಸಾಹಿಸುವುದಕ್ಕೆ ಆಕ್ಷೇಪವಿಲ್ಲ. ಆದರೆ ವಿಧಾನಸೌಧದ ಮೆಟ್ಟಿಲುಗಳನ್ನೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವುದರ ಹಿಂದಿನ ಕಾರಣವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ, ಉರ್ದು, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಕೊಂಕಣಿ ಹಾಗೂ ತುಳು ಸೇರಿದಂತೆ ಹಲವು ಭಾಷೆಗಳ ಜನರು ಕರ್ನಾಟಕದಲ್ಲಿದ್ದಾರೆ. ಎಲ್ಲ ಭಾಷೆಗಳಿಗೆ ಗೌರವ ನೀಡಬೇಕು. ಆದರೆ ಒಂದು ಭಾಷೆಗೆ ಮಾತ್ರ ವಿಶೇಷ ಸರ್ಕಾರಿ ವೇದಿಕೆ ನೀಡುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಕನ್ನಡಕ್ಕೆ ತನ್ನದೇ ರಾಜ್ಯದಲ್ಲಿ ಮೊದಲ ಆದ್ಯತೆ ನೀಡುವಂತೆ ಒತ್ತಾಯಗಳು ಮುಂದುವರಿದಿರುವಾಗ, ಮತ್ತೊಂದು ಭಾಷೆಯ ಹಬ್ಬಕ್ಕೆ ವಿಧಾನಸೌಧದಂತಹ ಪ್ರತಿಷ್ಠಿತ ಸ್ಥಳ ನೀಡಿರುವುದು ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಹಿಂದಿ ವಿಚಾರದಲ್ಲಿ ಸರ್ಕಾರದ ನಿಲುವು ಮತ್ತು ಉರ್ದು ಕಾರ್ಯಕ್ರಮಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯಲ್ಲಿನ ವ್ಯತ್ಯಾಸವನ್ನೂ ಅವರು ಪ್ರಶ್ನಿಸಿದ್ದಾರೆ. ಈ ನಿರ್ಧಾರವು ನಿರ್ದಿಷ್ಟ ಸಮುದಾಯವನ್ನು ಓಲೈಸುವ ರಾಜಕೀಯ ಸಂದೇಶವೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ಎಲ್ಲ ಭಾಷೆಗಳಿಗೂ ಇದೇ ಅವಕಾಶ ನೀಡುವುದಾದರೆ ಸರ್ಕಾರ ಸ್ಪಷ್ಟ ನೀತಿ ರೂಪಿಸಲಿ. ಇಲ್ಲದಿದ್ದರೆ ಉರ್ದುವಿಗೆ ಮಾತ್ರ ಈ ವಿಶೇಷ ಅವಕಾಶ ನೀಡಿರುವ ಮಾನದಂಡವನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.

ವಿಧಾನಸೌಧವು ಆಡಳಿತದ ಸಂಕೇತವಾಗಿದ್ದು, ಭಾಷಾವಾರು ಹಬ್ಬಗಳ ವೇದಿಕೆಯಾಗಬಾರದು. ಬೇರೆ ಭಾಷೆಗಳಿಗೆ ಗೌರವವಿರಲಿ, ಆದರೆ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸರ್ಕಾರಕ್ಕೆ ನನ್ನ ಕೆಲವು ನೇರ ಪ್ರಶ್ನೆಗಳು

  1. ವಿಧಾನಸೌಧದ ಮೆಟ್ಟಿಲುಗಳನ್ನೇ ಉರ್ದು ಹಬ್ಬಕ್ಕೆ ಆಯ್ಕೆ ಮಾಡಿರುವ ಕಾರಣವೇನು?
  2. ಇದೇ ಅವಕಾಶವನ್ನು ಕರ್ನಾಟಕದಲ್ಲಿರುವ ಪ್ರತಿಯೊಂದು ಭಾಷಾ ಸಮುದಾಯಕ್ಕೂ ನೀಡಲಾಗುತ್ತದೆಯೇ?
  3. ನೀಡುವುದಾದರೆ, ವಿಧಾನಸೌಧವು ಮುಂದಿನ ದಿನಗಳಲ್ಲಿ ಭಾಷಾವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಶಾಶ್ವತ ವೇದಿಕೆಯಾಗಬೇಕೇ?
  4. ನೀಡುವುದಿಲ್ಲವಾದರೆ, ಉರ್ದುವಿಗೆ ಈ ವಿಶೇಷ ಅವಕಾಶ ನೀಡಲು ಸರ್ಕಾರದ ಸ್ಪಷ್ಟ ಮಾನದಂಡವೇನು?
  5. ಈ ನಿರ್ಧಾರದಲ್ಲಿ ಕನ್ನಡದ ಪ್ರಾಥಮ್ಯ ಮತ್ತು ವಿಧಾನಸೌಧದ ಪ್ರತೀಕಾತ್ಮಕ ಸ್ಥಾನವನ್ನು ಸರ್ಕಾರ ಪರಿಗಣಿಸಿದೆಯೇ?
  6. ಈ ಕಾರ್ಯಕ್ರಮದ ಉದ್ದೇಶ ನಿಜವಾಗಿಯೂ ಭಾಷಾ-ಸಾಹಿತ್ಯ ಪ್ರೋತ್ಸಾಹವೇ ಆಗಿದ್ದರೆ, ಇತರ ಭಾಷೆಗಳಿಗೂ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ಸಿದ್ಧವೇ?
  7. ಇಲ್ಲದಿದ್ದರೆ, ಜನರು ಇದನ್ನು ಸರ್ಕಾರದ ಸಾಂಸ್ಕೃತಿಕ ನೀತಿಯೆಂದು ನೋಡಬೇಕೇ ಅಥವಾ ರಾಜಕೀಯ ಸಂದೇಶವೆಂದು ನೋಡಬೇಕೇ?
  8. “ಸರ್ಕಾರ ಭಾಷೆಗಳ ನಡುವೆ ಸೇತುವೆ ಕಟ್ಟುತ್ತಿದೆಯೇ?

ಅಥವಾ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷಾ ಗುರುತುಗಳನ್ನು ಪ್ರತ್ಯೇಕ ವೇದಿಕೆಗಳಾಗಿ ಬಳಸುತ್ತಿದೆಯೇ?”

ಈ ಪ್ರಶ್ನೆಗೆ ಉತ್ತರ ನೀಡಬೇಕಾದವರು ಜನರಲ್ಲ. ಸರ್ಕಾರವೇ ಎಂದು ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page