
ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ
ಶಿಕ್ಷಣಾಧಿಕಾರಿಗಳ ಕಚೇರಿ ಇವರ ಆಶ್ರಯದಲ್ಲಿ ನಡೆದ 14ರ
ವಯೋಮಿತಿಯ ವಲಯಮಟ್ಟದ ಕ್ರೀಡಾಕೂಟದಲ್ಲಿ ಕಾರ್ಕಳ ಜ್ಞಾನಸುಧಾ
ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿರುತ್ತಾರೆ.
8ನೇ ತರಗತಿಯ ದತ್ತಾತ್ರೇಯ ಸುನಿಲ್ ಕುಮಾರ್ 100 ಮೀ. ಮತ್ತು 200
ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ
ಪಡೆದು, ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡು, 8ನೇ
ತರಗತಿಯ ಆದ್ಯಾ ಶೆಟ್ಟಿ ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಪೀಹು ಪಿ
ಮೈಂದನ್ ಡಿಸ್ಕಸ್ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ
ಆಯ್ಕೆಯಾಗಿರುತ್ತಾರೆ.
8ನೇ ತರಗತಿಯ ಸಾನ್ವಿ ಹಾಗೂ ಆರ್ಯನ್ 100 ಮೀ. ಓಟದಲ್ಲಿ ತೃತೀಯ ಸ್ಥಾನ,
ಪ್ರಜ್ವಲ್ ಕಾಮತ್ 400 ಮೀ. ಓಟದಲ್ಲಿ ತೃತೀಯ ಸ್ಥಾನ ಹಾಗೂ ಬಾಲಕ
ಬಾಲಕಿಯರ ತಂಡಗಳು 4*100 ಮೀ. ರಿಲೇಯಲ್ಲಿ ತೃತೀಯ ಸ್ಥಾನ
ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ
ಶೆಟ್ಟಿಯವರು ಅಭಿನಂದಿಸಿ, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ
ಸಾಧನೆ ಮಾಡುವಂತೆ ಶುಭ ಹಾರೈಸಿದರು.































































































































