
ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ ಇದರ ವತಿಯಿಂದ ಅ.4ರಂದು ನಳಿನಾಕ್ಷಿ ಸಭಾಭವನ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮುರಂತಕೋಡಿ ಗೋವಿಂದ ಭಟ್ ಅವರು ದೀಪ ಪ್ರಜ್ವಲಿಸಲಿದ್ದು ದಯಾನಂದ ಪೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಭಟ್, ಪ್ರಜ್ವಲ್ ಆಚಾರ್ಯ, ಚಾವಡಿ ಮನೆ ಜಗನ್ನಾಥ ಶೆಟ್ಟಿ, ಹರ್ಷ ಶೆಟ್ಟಿ, ಬೋಳ ವಿಶ್ವನಾಥ್ ಕಾಮತ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್‌ಕೆಜಿಯಿಂದ 1ನೇ ತರಗತಿವರೆಗೆ ‘ಪರಿಸರ’, 2ರಿಂದ 4ನೇ ತರಗತಿವರೆಗೆ ‘ನವಿಲಿನ ಚಿತ್ರ ಪ್ರಕೃತಿಯೊಂದಿಗೆ’, 5ರಿಂದ 7ನೇ ತರಗತಿವರೆಗೆ ‘ಪ್ರಕೃತಿ ಉಳಿಸಿ’, 8ರಿಂದ 10ನೇ ತರಗತಿವರೆಗೆ ‘ಕರಾವಳಿ ಜೀವನ ಶೈಲಿ’,ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ‘ಕರಾವಳಿಯ ಸಾಂಸ್ಕೃತಿಕ ವೇಷಗಳು’ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಭಕ್ತಿಗೀತೆ, ಜಾನಪದಗೀತೆ, ಭಗವದ್ಗೀತೆ ಶ್ಲೋಕ ಕಂಠಪಾಠ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.
ಅಕ್ಟೋಬರ್ 20 ರಂದು ಮಧ್ಯಾಹ್ನ 1 ಗಂಟೆಯಿಂದ ಸಣ್ಣ ಮಕ್ಕಳಿಗೆ ಮುದ್ದು ಶಾರದೆ ಸ್ಪರ್ಧೆ ನಡೆಯಲಿದ್ದು ಅಕ್ಟೋಬರ್ 21ರಂದು ಸಾರ್ವಜನಿಕರಿಗಾಗಿ ಹೂ ಕಟ್ಟುವ ಸ್ಪರ್ಧೆ ನಡೆಯಲಿದೆ.































































































































