
ಹದಿನೇಳರ ವಯೋಮಾನದ ಬಾಲಕ/ಬಾಲಕಿಯರ ಖೋಖೋ ಪಂದ್ಯಾಟವು ಸರಕಾರಿ ಪ್ರೌಢಶಾಲೆ ಕಲ್ಯಾ ಇಲ್ಲಿ ದಿನಾಂಕ 15/09/2026 ರಂದು ನಡೆದಿದ್ದು ಸರಕಾರಿ ಪ್ರೌಢಶಾಲೆ ಕಲ್ಯಾದ ಬಾಲಕರು ನಾಲ್ಕನೇ ಬಾರಿ ಜಿಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿ ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ಕ್ರೀಡಾಕೂಟದಲ್ಲಿ ಹತ್ತು ತಂಡಗಳು ಭಾಗವಹಿಸಿದ್ದವು. ಅಂತೆಯೇ ಬಾಲಕರ ವಿಭಾಗದ ರನ್ನರ್ ಅಪ್ ಆಗಿ ಬ್ರಹ್ಮಾವರ ವಲಯದ ವಿವೇಕ ಕೋಟ ಪ್ರೌಢಶಾಲೆ ತಂಡ ಗೆಲುವಿನ ನಗೆ ಬೀರಿತು. ಬಾಲಕಿಯರ ಪಂದ್ಯಾಟದಲ್ಲಿ ಬ್ರಹ್ಮಾವರ ವಲಯದ ಸರಕಾರಿ ಪ್ರೌಢಶಾಲೆ ಆವರ್ಸೆ ವಿದ್ಯಾರ್ಥಿಗಳು ಗೆಲುವನ್ನು ಸಾಧಿಸಿದರೆ, ಅದೇ ವಿಭಾಗದಲ್ಲಿ ರನ್ನರ್ ಅಪ್ ಆಗಿ ಕಾರ್ಕಳ ತಾಲೂಕಿನ ಕಾಂತೇಶ್ವರ ಪ್ರೌಢಶಾಲೆ ಕಾಂತಾವರ ಹೊರಹೊಮ್ಮಿತು.
ಕಾರ್ಯಕ್ರಮದಲ್ಲಿ ಶಾಲಾ SDMC ಅಧ್ಯಕ್ಷರಾದ ರವೀಂದ್ರ ನಾಯಕ ರವರು ಹಾಗೂ ಎಲ್ಲಾ ಸದಸ್ಯರು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ರವಿಚಂದ್ರ ಕಾರಂತ್ ರವರು, ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಕುಸುಮಾಕರ ಶೆಟ್ಟಿ ಯವರು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ವಿಜಯಕುಮಾರ್ ಶೆಟ್ಟಿ ಯವರು, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರುಗಳು, ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀಯುತ ಗಣಪಯ್ಯ ಎಚ್. ಕೆ. ರವರು, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಸುಮನಾ ಹಾಗೂ ಸುಭಾಷಚಂದ್ರ ಶೆಟ್ಟಿಗಾರರವರು, ಕಲ್ಯಾ ಗ್ರಾಮ ಪಂಚಾಯತಿಯ ಮಾಜಿ ಸದಸ್ಯರುಗಳು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿಯವರು,ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ್ ಸರ್ ರವರು, ಮುಂಬೈಯ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಭಾರತಿ ಉಮೇಶ್ ಕೋಟ್ಯಾನ್ ರವರು, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿಗಳ ಹಾಗೂ ಊರಿನ ದಾನಿಗಳ ಸಹಾಯದಿಂದ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿ ಬಂತು. ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸಿದ ಕಲ್ಯಾ ಶಾಲೆಯ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ಎನ್ ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಗಣೇಶ್ ಹಾಗೂ ಪ್ರಸಾದಿನಿ ಯವರು ನೆರವೇರಿಸಿದರೆ, ಮುಖ್ಯೋಪಾಧ್ಯಾಯರಾದ ರಾಮ ಮೊಗೇರ ರವರು ಸ್ವಾಗತಿಸಿ ದೈಹಿಕ ಶಿಕ್ಷಕರಾದ ಚಂದ್ರಶೇಖರ್ ರವರು ವಂದಿಸಿದರು.






























































































































