
ಕಾರ್ಕಳ: ಅಕಾಡೆಮಿ ಆಫ್ ಜನರಲ್ ಎಜುಕೇಶನ್ (AGE) ವತಿಯಿಂದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ AGE ವ್ಯಾಪ್ತಿಯ ಕಾಲೇಜು ಶಿಕ್ಷಕರ 5ನೇ ಸಮಾವೇಶ ಸೆ.19ರಂದು ನಡೆಯಲಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಸಹಯೋಗದಲ್ಲಿ, ಮಾಹೆ ಯ ಚಾನ್ಸಲರ್ ಡಾ. ರಾಮದಾಸ್ ಎಂ. ಪೈ ಅವರ 91ನೇ ಹುಟ್ಟುಹಬ್ಬದ ಅಂಗವಾಗಿ ಈ ಸಮಾವೇಶ ಆಯೋಜಿಸಲಾಗಿದೆ.
ಸೆ.19ರಂದು ಬೆಳಗ್ಗೆ 9.30ಕ್ಕೆ ಶ್ರೀ ಭುವನೇಂದ್ರ ಕಾಲೇಜಿನ ಎಸ್.ಆರ್. ಹಾಲ್ನಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. MAHE ಪ್ರೊ-ಚಾನ್ಸಲರ್ ಹಾಗೂ AGE ಅಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದು, ಎಸ್ಬಿಸಿ ಆಡಳಿತ ಮಂಡಳಿ ಅಧ್ಯಕ್ಷ ಸಿಎ ಶಿವಾನಂದ ಪೈ ಬಿ. ಅಧ್ಯಕ್ಷತೆ ವಹಿಸಲಿದ್ದಾರೆ. AGE ಮಣಿಪಾಲದ ಕಾರ್ಯದರ್ಶಿ ಡಾ. ನಾರಾಯಣ ಸಭಾಹಿತ್ ಮುಖ್ಯ ಅತಿಥಿಯಾಗಿ ಹಾಗೂ AGE ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ರಂಗನಾಥ ಪೈ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ರಾಮ್ ನಾರಾಯಣ್ ಅವರು ‘ಸೇಫ್ ಲರ್ನಿಂಗ್ ಎನ್ವಿರಾನ್ಮೆಂಟ್’ ವಿಷಯದ ಕುರಿತು, ಡಾ. ಪೂರ್ಣಿಮಾ ಕುಂದಾಪುರ ಅವರು ‘ಟೆಕ್ನಾಲಜಿ ಇನ್ ಟೀಚಿಂಗ್’ ಕುರಿತು ಹಾಗೂ ಶ್ರೀ ಶಶ್ರೀಕ್ ರೆಡ್ಡಿ ಅವರು ‘AI to 10x Your Productivity’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























































































































