ಸೆ.15 ಇಂದು ತುಳುರಂಗಭೂಮಿಯಲ್ಲಿ ದಾಖಲೆ ಬರೆದ “ಗಗ್ಗರ” ತುಳು ನಾಟಕ ಪ್ರದರ್ಶನ

ತುಳು ರಂಗಭೂಮಿಯಲ್ಲಿ ದಾಖಲೆಯ ಪ್ರಯೋಗ ಹಾಗೂ ಜನಮೆಚ್ಚುಗೆಯನ್ನು ಪಡೆದಿರುವ ಗಗ್ಗರ ತುಳು ನಾಟಕ ಇಂದು ಕಾರ್ಕಳ ಜೋಡುರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯಲಿದೆ.
ಸಮಿತಿಯ ಸದಸ್ಯರೇ ಈ ನಾಟಕವನ್ನು ಜಹುಜನರ ಅಪೇಕ್ಷೆಯ ಮೇರೆಗೆ ಪ್ರದರ್ಶಿಸಲಿದ್ದಾರೆ. ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಪುರಸ್ಕೃತ ಈ ನಾಟಕವನ್ನು ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ ರಚಿಸಿದ್ದು, ಹಿರಿಯ ಕಲಾವಿದ ಪ್ರಸಾದ್ ಐಸಿರ ನಿರ್ದೇಶಿಸಿದ್ದಾರೆ. ರಾತ್ರಿ 9 ಗಂಟೆಗೆ ಈ ನಾಟಕ ಪ್ರದರ್ಶನಗೊಳ್ಳಲಿದೆ.






























































































































